ಸುದ್ದಿ ಸಂಕ್ಷಿಪ್ತ

ವೇದ ವಿದ್ವಾಂಸರಿಗೆ ಸಮ್ಮಾನ ಸಮಾರಂಭ; ಜ.15 ರಂದು

ವಿವಿಧ ವೇದ ವಿದ್ವಾಂಸರಿಗೆ ವೇದಶಾಸ್ತ್ರ ಪೋಷಿಣೀ ಸಭಾ ವತಿಯಿಂದ ಸಮ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಜ.15, ಭಾನುವಾರದಂದು, ಸಂಜೆ 4.30 ಗಂಟೆಗೆ ಮೈಸೂರಿನ ಕುವೆಂಪು ನಗರದಲ್ಲಿರುವ ಆದಿಚುಂಚನಗಿರಿ ರಸ್ತೆಯಲ್ಲಿರುವ ಗಾನಭಾರತೀ – ವೀಣೆ ಶೇಷಣ್ಣ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.

ಸುಪ್ರೀಂ ಕೊರ್ಟ್‍ನ ನಿವೃತ್ತ ನ್ಯಾಯಮೂರ್ತಿ ಡಾ. ಎಂ.ಎನ್. ವೆಂಕಟಾಚಲಯ್ಯ ಅವರು ವಿದ್ವಾಂಸರಿಗೆ ಸಮ್ಮಾನ ಪ್ರದಾನ ಮಾಡಲಿದ್ದಾರೆ. ವೇದಶಾಸ್ತ್ರ ಪೋಷಿಣೀ ಸಭಾ ಅಧ್ಯಕ್ಷ ವಿದ್ವಾನ್ ಪ್ರೊ. ಬಿ.ಎನ್.ನಾಗರಾಜ ಭಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಸನ್ಮಾನ ಸ್ವೀಕರಿಸುವ ವಿದ್ವಾಂಸರು:

  • ವಿದ್ವಾನ್ ಮೋಹನ ಭಟ್ಟ ಜೋಷಿ, ಕಲಬುರ್ಗಿ, ಋಗ್ವೇದ ವಿದ್ವಾಂಸರು
  • ವಿದ್ವಾನ್ ಎಂ. ಗೋಂವಿದ ಭಟ್ಟ, ಬಳ್ಳಾರಿ, ಕೃಷ್ಣ ಯಜುರ್ವೇದ ವಿದ್ವಾಂಸರು
  • ವಿದ್ವಾನ್ ಎಂ.ಎಸ್. ಅಶ್ವತ್ಥನಾರಾಯಣ ಅವಧಾನಿ, ಮತ್ತೂರು, ಕೃಷ್ಣ ಯಜುರ್ವೇದ ವಿದ್ವಾಂಸರು
  • ವಿದ್ವಾನ್ ಸುಬ್ರಾಯಭಟ್ಟ, ಹೊನ್ನಾವರ, ಸಾಮವೇದ ವಿದ್ವಾಂಸರು
  • ವಿದುಷಿ ಡಾ. ಎಂ.ಆರ್. ಲೀಲಾ, ಬೆಂಗಳೂರು, ಅಲಂಕಾರಶಾಸ್ತ್ರ ವಿದ್ವಾಂಸರು
  • ವಿದ್ವಾನ್ ಡಾ. ಟಿ.ವಿ. ಸತ್ಯನಾರಾಯಣ, ಮೈಸೂರು, ಅಲಂಕಾರ, ವ್ಯಾಕರಣಶಾಸ್ತ್ರ ವಿದ್ವಾಂಸರು
  • ವಿದ್ವಾನ್ ಡಾ. ಆರ್. ಶ್ರೀಧರಶಾಸ್ತ್ರೀ ಸೂರಿ, ತುಮಕೂರು, ಪ್ರಾಚೀನ ಮತ್ತು ನವೀನ ನ್ಯಾಯಶಾಸ್ತ್ರ ವಿದ್ವಾಂಸರು
  • ವಿದ್ವಾನ್ ಜಿ. ಶಿವರಾಮ ಅಗ್ನಿಹೋತ್ರಿ, ಬೆಂಗಳೂರು, ಅದ್ವೈತ ವೇದಾಂತ ವಿದ್ವಾಂಸರು
  • ವಿದ್ವಾನ್ ರಾಮಚಂದ್ರ ಜಿ. ಭಟ್ಟ, ಬೆಂಗಳೂರು, ಅದ್ವೈತ ವೇದಾಂತ, ಯೋಗ ವಿದ್ವಾಂಸರು
  • ವಿದ್ವಾನ್ ಡಾ.ರಾಮಾಚಾರ್ಯ ಮಾಳಗಿ, ಬೆಂಗಳೂರು, ದ್ವೈತ ವೇದಾಂತ ವಿದ್ವಾಂಸರು.

Leave a Reply

comments

Related Articles

error: