ಪ್ರಮುಖ ಸುದ್ದಿ

ಗುರುಶಿಷ್ಯ ಪರಂಪರೆ ಮೂಲಕ ಕಲೆಯನ್ನು ಉಳಿಸಿ : ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಕರೆ

ರಾಜ್ಯ(ಮಡಿಕೇರಿ) ಜ.15 :- ಯುವ ಜನಾಂಗ ಹೆಚ್ಚು ಉತ್ಸಾಹದಿಂದ ಭಾಗವಹಿಸಿ ಹಿಂದಿನ ಜಾನಪದ ಸಾಹಿತ್ಯವನ್ನು ಕರಗತ ಮಾಡಿಕೊಂಡು ಸಮಾಜಕ್ಕೆ ಪರಿಚಯಿಸುವ ಕೆಲಸವಾಗಬೇಕು ಹಾಗೂ ವಿದ್ಯಾರ್ಥಿ ದಿಸೆಯಲ್ಲಿ ಸಂಗೀತದ ಆಸಕ್ತಿ ಬೆಳಸಿಕೊಳ್ಳಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಕರೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕುಶಾಲನಗರದ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಗಿರಿಜನ ಉಪ ಯೋಜನೆಯಡಿ ಗುರುಶಿಷ್ಯ ಪರಂಪರೆ ತರಬೇತಿ ಮೂಲಕ ಸಂಗೀತ ಕಾರ್ಯಕ್ರಮದ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತಮ ಯೋಜನೆಗಳ ಮೂಲ ಸಾಹಿತ್ಯ ಸಂಸ್ಕೃತಿಗೆ ಪೂರಕವಾಗಿ ಮನರಂಜನೆ ನೀಡುತ್ತಾ ಬರುತ್ತಿದೆ ಎಂದರು. ಶಿಕ್ಷಣದ ಜೊತೆಗೆ ಮೌಲ್ಯವರ್ದಿತ ಜೀವನ ಮಟ್ಟ ಕಾಯ್ದುಕೊಳ್ಳಲು ನಾವು ಸಂಗೀತದ ಕಡೆಗೆ ಗಮನಹರಿಸಬೇಕು ಎಂದು ಸಾಗರ್ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು. ಗ್ರಾಮೀಣ ಸೊಗಡಿನ ಜಾನಪದ ಕಲೆ, ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಕಲೆಯನ್ನು ಅಳವಡಿಸಿಕೊಂಡು ಕಲೆಯು ಒಂದು ಜೀವನದ ಅವಿಭಾಜ್ಯ ಅಂಗವಾಗಬೇಕೆಂದರು.

ಮುಖ್ಯ ಅತಿಥಿಯಾದ ಆಹಾರ ಸಂರಕ್ಷಣಾ ಅಭಿಯಾನದ ಸಂಚಾಲಕ ಎನ್.ಕೆ.ಮೋಹನ್‍ಕುಮಾರ್ ಮಾತನಾಡಿ ಹಿಂದಿನ ಶಿಕ್ಷಣ ಬಹಳ ಕಷ್ಟದಾಯಕವಾಗಿದ್ದು, ನಾವೆಲ್ಲರೂ ಕಷ್ಟಪಟ್ಟು ಶಿಕ್ಷಣ ಪಡೆಯುತ್ತಿದ್ದು, ಓದಲು ಇಂದು ಅನೇಕ ಉತ್ತಮ ಸೌಕರ್ಯ ಇದೆ ಎಂದು ಅದರ ಸದುಪಯೋಗವಾಗಬೇಕೆಂದರು, ಸಾಹಿತ್ಯ ಸಾಂಸ್ಕೃತಿಕ ಬೆಳೆಸಲು ತಮ್ಮ ಜೀವನವನ್ನು ಮುಡಿಪಾಗಿಡುವುದರೊಂದಿಗೆ ತಾವು ಸಹ ಸಂಗೀತದ ಸದಭಿರುಚಿ ಬೆಳೆಸಿಕೊಳ್ಳಬೇಕೆಂದರು ಹಾಗೂ ಅನ್ನ ಪರಬ್ರಹ್ಮ ವಸ್ತು ಅದನ್ನು ಪೋಲು ಮಾಡಬೇಡಿ ಎಂದು ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಮಾಜ ಕಲ್ಯಾಣ  ಇಲಾಖೆಯ ವಿದ್ಯಾರ್ಥಿ ನಿಲಯದ ವಾರ್ಡನ್ ಮಧು ಅವರು ಮಾತನಾಡಿ ಸಂಗೀತದ ಸದುಪಯೋಗವಾಗಬೇಕಾದರೆ ನಿಮ್ಮಗಳ ಸಹಕಾರ ಅಗತ್ಯ ಎಂದರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅನೇಕ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದು ಅದರಲ್ಲೂ ಜೀವನದಲ್ಲಿ ಬೆಳವಣಿಗೆ ಸಹಜ ಬೆಳವಣಿಗೆಯೊಂದಿಗೆ ಬೌದ್ಧಿಕ, ಶಿಕ್ಷಣ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಕಾಸವಾಗಬೇಕೆಂದರು ಅದರಲ್ಲೂ ಸಾಂಸ್ಕೃತಿಕ ವಿಕಾಸ ಮೂಲಕ ತಮ್ಮ ಕಲೆಯನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ ಎಂದರು ಪ್ರಾಸ್ತಾವಿಕ ನುಡಿಯಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಣಜೂರು ಮಂಜುನಾಥ ಮೊದಲಿಗೆ ಸ್ವಾಗತಿಸಿ ವಂದಿಸಿದರು. ವೇದಿಕೆಯಲ್ಲಿ ಗುರುಶಿಷ್ಯ ಪರಂಪರೆ ಕಾರ್ಯಕ್ರಮದ ಶಿಕ್ಷಕ ಷಡಾಕ್ಷರಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: