ದೇಶ

ರಜೆ ಸಿಗದ ಕೋಪ: ಸಹೋದ್ಯೋಗಿಗಳನ್ನೇ ಶೂಟ್ ಮಾಡಿದ ಸಿಐಎಸ್ ಎಫ್ ಯೋಧ

ಬಿಹಾರ: ರಜೆ ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ತಾಪ ಮಾಡಿಕೊಂಡಿದ್ದ ಸಿಐಎಸ್ ಎಫ್ ಯೋಧನೊಬ್ಬ ಸಿಟ್ಟಿನಿಂದ ತನ್ನ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ಪರಿಣಾಮವಾಗಿ ಇಬ್ಬರು ಸ್ಥಳದಲ್ಲಿ ಮತ್ತು ಉಳಿದಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಲಬೀರ್ ಈ ಕೃತ್ಯ ನಡೆಸಿದ್ದು, ಆತನನ್ನು ಬಂಧಿಸಲಾಗಿದೆ.

ಈ ಘಟನೆ ಬಿಹಾರದ ಔರಂಗಬಾದ್ ಜಿಲ್ಲೆಯ ನವಿನಗರ್ ವಿದ್ಯುತ್ ಉತ್ಪಾದನಾ ಕಂಪನಿ ಆವರಣದೊಳಗೆ ಗುರುವಾರ ಸುಮಾರು 12.30ರ ಸುಮಾರಿಗೆ ನಡೆದಿದೆ. ನವಿನಗರ್ ವಿದ್ಯುತ್ ಉತ್ಪಾದನಾ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಲಬೀರ್ ರಜೆ ಸಿಗಲಿಲ್ಲ ಎಂಬ ಸಿಟ್ಟಿನಿಂದ ಈ ಕೃತ್ಯ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತಪಟ್ಟವರನ್ನು ಬಚ್ಚಾ ಶರ್ಮಾ, ಎನ್. ಮಿಶ್ರಾ, ಅರವಿಂದ್ ಕುಮಾರ್, ಮತ್ತು ಜಿ. ಎಸ್ ರಾಮ್ ಎಂದು ಗುರುತಿಸಲಾಗಿದೆ.

Leave a Reply

comments

Related Articles

error: