ಮನರಂಜನೆ

ಸುದೀಪ್ ಅಭಿನಯದ `ಪೈಲ್ವಾನ್’ ಚಿತ್ರದ ಟೀಸರ್ ರಿಲೀಸ್

ಬೆಂಗಳೂರು,ಜ.16-ಸಂಕ್ರಾಂತಿ ಹಬ್ಬದ ಪ್ರಯುಕ್ತ ಸ್ಯಾಂಡಲ್ ವುಡ್ ಹೊಸ ಸಿನಿಮಾಗಳ ಪೋಸ್ಟರ್, ಹಾಡುಗಳು, ಟ್ರೇಲರ್ ಗಳು ಬಿಡುಗಡೆ ಮಾಡಿ ಸಿನಿರಸಿಕರಿಗೆ ಸಂತಸ ನೀಡಿದೆ.

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಪೈಲ್ವಾನ್ ಚಿತ್ರದ ಎರಡನೇ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ಸಖತ್ ವೈರಲ್ ಆಗಿದೆ. ಎಲ್ಲರ ಮೆಚ್ಚುಗೆ ಗಳಿಸಿದೆ.

1 ನಿಮಿಷ 3 ಸೆಕೆಂಡ್ ನ ಟೀಸರ್ ಅಬ್ಬರಿಸುತ್ತಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈ ಬೇಸಿಗೆಗೆ ಸಿನಿಮಾ ಬಿಡುಗಡೆಯಾಗಲಿದೆ.

ಹೆಬ್ಬುಲಿ ಬಳಿಕ ಮತ್ತೆ ಸುದೀಪ್ ಹಾಗೂ ಕೃಷ್ಣ ಜೋಡಿ ಪೈಲ್ವಾನ್ ಸಿನಿಮಾ ಮಾಡಿದ್ದಾರೆ. ನಿರ್ದೇಶನ ಮಾತ್ರವಲ್ಲದೆ ಈ ಸಿನಿಮಾಗೆ ಅವರೇ ಬಂಡವಾಳ ಹಾಕಿದ್ದಾರೆ. ಆಕಾಂಕ್ಷ ಸಿಂಗ್ ಸಿನಿಮಾಗೆ ನಾಯಕಿಯಾಗಿದ್ದಾರೆ.

ಪೈಲ್ವಾನ್ ಟೀಸರ್ ಜತೆಗೆ, ಯಜಮಾನ ಚಿತ್ರದ ‘ಶಿವನಂದಿ’ ಹಾಡು, ‘ಸೀತಾರಾಮ ಕಲ್ಯಾಣ’ ಸಿನಿಮಾದ ‘ಮಾಂಗಲ್ಯಂ ತಂತುನಾನೇನಾ..’ ಲಿರಿಕಲ್ ಹಾಡುಗಳು ಬಿಡುಗಡೆಯಾಗಿದೆ. ಜತೆಗೆ ಒಡೆಯ, ನಟ ಸಾರ್ವಭೌಮ, ಗಿಮಿಕ್, ಬೆಲ್ ಬಾಟಂ, ಸೂಜಿದಾರ, ಎಲ್ಲಿದೆ ಇಲ್ಲಿ ತನಕ, ಕನ್ನಡ್ ಗೊತ್ತಿಲ್ಲ, ಬಜಾರ್, ಪ್ರೀಮಿಯರ್ ಪದ್ಮಿನಿ ಸಿನಿಮಾಗಳ ಹೊಸ ಪೋಸ್ಟರ್ ಗಳು ಬಿಡುಗಡೆಯಾಗಿವೆ. (ಎಂ.ಎನ್)

Leave a Reply

comments

Related Articles

error: