
ಮೈಸೂರು
ಟೀಂ ಮೋದಿ ನಂಜನಗೂಡು ವತಿಯಿಂದ ಶ್ರೀ ಕಂಠೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಎಳ್ಳುಬೆಲ್ಲ ವಿತರಣೆ
ಮೈಸೂರು,ಜ.16:- ಟೀಂಮೋದಿ ನಂಜನಗೂಡು ವತಿಯಿಂದ ಶ್ರೀ ಕಂಠೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಎಳ್ಳುಬೆಲ್ಲ ಹಂಚಲಾಯಿತು.
ನಿನ್ನೆ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಎಳ್ಳು ಬೆಲ್ಲ ನೀಡಿದ ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಗಳು ಮಾತನಾಡಿ ದೇಹದ ಆರೋಗ್ಯಕ್ಕೆ ಎಳ್ಳು ಬೆಲ್ಲ ಹೇಗೆ ಒಳ್ಳೆಯದೋ ಹಾಗೆ ದೇಶದ ಆರೋಗ್ಯ ಚೆನ್ನಾಗಿರಬೇಕೆಂದರೆ ಈ ಬಾರಿ ನರೇಂದ್ರ ಮೋದಿಯವರಿಗೇ ಮತ ನೀಡಬೇಕೆಂದು ವಿನಂತಿ ಮಾಡಿಕೊಂಡು ಕರಪತ್ರವನ್ನು ಹಂಚಿದರು.
ನರೇಂದ್ರಮೋದಿಯವರೇ ಈ ಬಾರಿಯೂ ದೇಶದ ಪ್ರಧಾನಿ ಹುದ್ದೆಯನ್ನು ಅಲಂಕರಿಸಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು. (ಕೆ.ಎಸ್,ಎಸ್.ಎಚ್)