ಪ್ರಮುಖ ಸುದ್ದಿಮೈಸೂರು

10 ಮಂದಿ ದರೋಡೆಕೋರರನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿ: ಡಾ.ಸುಬ್ರಹ್ಮಣ್ಯೇಶ್ವರಾವ್

10 ಮಂದಿ ದರೋಡೆಕೋರರು, ಓರ್ವ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕ ಹಾಗೂ 3 ಮಂದಿ ಕೇಬಲ್ ವೈರ್ ಕಳ್ಳರನ್ನು ಬಂಧಿಸುವಲ್ಲಿ ಮೈಸೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದರು.
ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಾ.ಸುಬ್ರಹ್ಮಣ್ಯೇಶ್ವರರಾವ್ ಮಾತನಾಡಿ, ಬಂಧಿತರಿಂದ ಒಟ್ಟು18,98,000 ರೂ.ನಗದು, ಕಾರು, ದ್ಚಿಚಕ್ರ ವಾಹನಗಳು ಮತ್ತು ಕೇಬಲ್  ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಮಂಡ್ಯ ಮೂಲದ ಭಾಗ್ಯ, ಮೈಸೂರು ಮೂಲದವರಾದ ಮಧುಸೂಧನ, ಶರತ್ ಕುಮಾರ್, ಕಾರ್ತಿಕ್ ಸಿ,  ಅರ್ಜುನ್ ಸಿ, ಮಂಡ್ಯದ ಎಂ.ಡಿ ರವಿಕುಮಾರ್, ಮೈಸೂರಿನವರಾದ ದರ್ಶನ್ ಎನ್, ಮಂಜುನಾಥ್ ಆರ್, ಸತೀಶ್, ಶ್ರೀರಂಗಪಟ್ಟಣದ ಬಿ.ಸಿ ಸುನಿಲ್  ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದರು.

ದ್ವಾರಕೀಶ್ ಎಂಬುವರಿಂದ ದರೋಡೆ ಮಾಡಿದ್ದ 3.5 ಲಕ್ಷ ರೂಪಾಯಿ, 2 ಇನ್ನೋವಾ ಕಾರು, 2 ಡ್ಯ್ರಾಗರ್, 3 ಲಾಂಗ್ ಗಳು, 1 ಕಬ್ಬಿಣದ ರಾಡು, 12 ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿಯಾಗಿರುವ ಭಾಗ್ಯ ಸ್ಥಳೀಯವಾಗಿ ಯುವಕರನ್ನು ಸಂಘಟನೆ ಮಾಡಿ ದರೋಡೆ ನಡೆಸುತ್ತಿದ್ದ ಸಂಗತಿ ಪೋಲೀಸರ ವಿಚಾರಣೆ ವೇಳೆ ಬಹಿರಂಗಗೊಂಡಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ರುದ್ರಮುನಿ, ಡಾ.ಶೇಖರ್ ಉಪಸ್ಥಿತರಿದ್ದರು.

Leave a Reply

comments

Related Articles

error: