ಮೈಸೂರು

ದೇಶದ ವೈವಿಧ್ಯತೆಯನ್ನು ಎಲ್ಲೆಡೆ ಸಾರಿದ್ದು ಸ್ವಾಮಿ ವಿವೇಕಾನಂದರು : ಎಸ್.ಎ.ರಾಮದಾಸ್

ಸ್ವಾಮಿ ವಿವೇಕಾನಂದ 155ನೇ ಜಯಂತಿ ಅಂಗವಾಗಿ ಗುರುವಾರ ಮೈಸೂರು ವಿವೇಕಾನಂದ ವೃತ್ತದಲ್ಲಿರುವ ವಿವೇಕಾನಂದರ ಪ್ರತಿಮೆಗೆ ಮಾಜಿ ಸಚಿವರಾದ ಎಸ್.ಎ. ರಾಮದಾಸ್ ಮಾಲಾರ್ಪಣೆಗೈದರು.

ಬಳಿಕ ಮಾತನಾಡಿದ ಅವರು ವಿವೇಕಾನಂದರ ತತ್ವ ಸಿದ್ಧಾಂತಗಳು ಇಂದಿನ ಯುವಕರುಗಳಿಗೆ ಆದರ್ಶ ಪ್ರಾಯವಾಗಿದೆ. ನಮ್ಮ ದೇಶದ ಕಡೆ ದೊಡ್ಡ ದೊಡ್ಡ ರಾಷ್ಟ್ರಗಳು ತಿರುಗಿ ನೋಡಲು ಕಾರಣಕರ್ತರಾದರು. ಸ್ವಾಮಿ ವಿವೇಕಾನಂದರು ಕೇವಲ 39 ವರ್ಷ ಬದುಕಿದ್ದರೂ ಕೂಡ ನಮ್ಮ ದೇಶದ ವೈವಿಧ್ಯತೆಯನ್ನು ಎಲ್ಲೆಡೆ ಸಾರಿದ್ದಾರೆ. ಅದಕ್ಕಾಗಿ ನಮ್ಮ ಸನಾತನ ಧರ್ಮದ ಕಡೆ ವಿದೇಶಿಯರು ಆಕರ್ಷಿತರಾಗಿ ಸಂಶೋಧನೆ ಮಾಡುತ್ತಿದ್ದಾರೆ, ಇಂದಿನ ಯುವಜನರು ಈ ದಿನ ರಾಷ್ಟ್ರೀಯ ಯುವ ದಿನೋತ್ಸವವಾಗಿ ಆಚರಿಸುತ್ತಿದ್ದಾರೆ ಎಂದರು.

ರಘುರಾಮ್ ಅವರು ಮಾತಾನಾಡಿ, ಸ್ವಾಮಿ ವಿವೇಕಾನಂದರ ಪುಸ್ತಕ ಓದುವುದರ ಮೂಲಕ ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

ಪತ್ರಿಕಾ ಛಾಯಾಗ್ರಾಹಕ ನಂದನ್, ಕರಾಟೆ ಪಟು ಶಶಾಂಕ್, ಕ್ರಿಕೆಟಿಗ ನಿಶಾಂತ್, ವೈದ್ಯೆ ರಾಣಿ ಪ್ರಭ, ಪುರೋಹಿತ ಅಯ್ಯಂಗಾರ್ ಹಾಗೂ ಸಾಂಸ್ಕೃತಿಕ, ರಾಜಕೀಯ, ಕ್ರೀಡಾ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದಿರುವ ಐದು ಜನ ಸಾಧಕರಿಗೆ ವಿವೇಕ ರತ್ನ ಶ್ರೀ 2017 ನೀಡಿ ಗೌರವಿಸಲಾಯಿತು.

ಯುವಭಾರತ್ ಸಂಘಟನೆಯ ಸಂಚಾಲಕ ಜೋಗಿಮಂಜು, ನಗರಪಾಲಿಕೆಯ ಸದಸ್ಯರುಗಳಾದ ಸೀಮಾ ಪ್ರಸಾದ್, ಜಗದೀಶ್, ಸ್ನೇಕ್ ಶ್ಯಾಮ್, ಮಾ.ವಿ.ರಾಮಪ್ರಸಾದ್, ಕೆ.ಎಂ.ಪಿ.ಕೆ.ಟ್ರಸ್ಟ್’ನ ವಿಕ್ರಮ್ ಅಯ್ಯಂಗಾರ್, ಅಜಯ್ ಶಾಸ್ತ್ರೀ, ರಘು, ಬಿ.ಎಂ. ಕಡಕೋಳ ಜಗದೀಶ್, ಸಂದೀಪ್, ಗಿರಿಶ್, ಮನೋಜ, ವಡಿವೇಲು, ಸೋಮಶೇಖರ್, ಲೋಕೇಶ ತೇಜಸ್ ಗೌಡ, ಇಂದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: