ಮೈಸೂರು

ಜನವರಿ 24ರಂದು ಉದ್ಯೋಗ ಮೇಳ

ಮೈಸೂರು, ಜ.17:-  ರಾಪ್ಟ್ರೀಯ ವೃತ್ತಿ ಸೇವಾ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ ಜಿಲ್ಲಾ ಮಟ್ಟದ ಉದ್ಯೋಗ ಮೇಳವನ್ನು 24-01-2019ರ ಗುರುವಾರ ಬೆಳಿಗ್ಗೆ 10 ಗಂಟೆಗೆ ಎನ್.ಆರ್.ಮೊಹಲ್ಲಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಚೇರಿಯ ಆವರಣದಲ್ಲಿ ಆಯೋಜಿಸಲಾಗಿದೆ.

ಉದ್ಯೋಗ ಮೇಳದಲ್ಲಿ ಮೈಸೂರಿನ ಸುರಭಿ ಪ್ಲಾನ್‍ಟೆಕ್ ಬಿ.ಎಸ್.ಗೌಡ ಎಂಟರ್ ಪ್ರೈಸಸ್, ತೇಜಸ್ವಿನಿ ಎಂಟರ್‍ಪ್ರೈಸಸ್, ಹಿಂದುಜಾಗ್ಲೋಬಲ್ ಸಲ್ಯೂಷನ್, ಗ್ರಾಸ್‍ರೋಟ್, ರಾಣೆ ಮದ್ರಾಸ್ ಪ್ರೈ. ಲಿ. ವರ್ಲ್ಡ್ ಡಿಜಿಟಲ್ ಪ್ರೈ.ಲಿ, , ಪ್ಲಾಸ್ಸಿ, ತ್ರಿವೇಣಿ ಇಂಜಿನಿಯರಿಂಗ್ ವಕ್ರ್ಸ, ಥೀರಂ ಕಂಪನಿ, ಪೀಪಲ್ ಮ್ಯಾನೇಜ್‍ಮೆಂಟ್, ಎಲೇಷೀಯಾ ಪ್ರೈ.ಲಿ, ಬಿ.ಎಸ್.ಎಲ್‍ಇಂಡಿಯಾ ಪ್ರೈ.ಲಿ, ಜೋಆಲೋಕಾಸ್, ಬುರೇಕಾ ಎಕ್ಸಕರ್ಷನ್ ಪ್ರೈ., ಯುರೇಕಾ ಪ್ರೈ ಲಿ., ಅರಸ್‍ಕಾರ್ ಪ್ರೈ ಲಿ, ಪ್ರಥಮ್‍ ಎಜ್ಯೂಕೇಷನ್ ಫೌಂಡೇಷನ್, ಎಮ್ಸ್, ನೆಸೋ, ಜುಬಿಲೇಟ್, ಬೆಂಗಳೂರಿನ ಟೇಸ್ಲೇಇನ್ಪೋಟೇಕ್ ಪ್ರೈ.ಲಿ ಇನ್ನೀತರೆ ಖಾಸಗಿ ನಿಯೋಜಕರುಗಳು ಭಾಗವಹಿಸಲಿದ್ದಾರೆ.

ಎಸ್‍ಎಸ್‍ಎಲ್‍ಸಿ ಉತ್ತೀರ್ಣ ಅಥವಾ ಅನುತ್ತೀರ್ಣ, ಪಿಯುಸಿ, ಜೆಓಸಿ, ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್,  ಯಾವುದೇ ಪದವಿಗಳಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅರ್ಹ ನಿರುದ್ಯೋಗ ಪುರುಷ/ಮಹಿಳಾ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬಹುದು.  ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ಸಹಾಯಕ ನಿರ್ದೇಶಕರು ದೂರವಾಣಿ ಸಂಖ್ಯೆ :0821-2489972ರಲ್ಲಿ ಸಂಪರ್ಕಿಸಬಹುದು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: