
ಸುದ್ದಿ ಸಂಕ್ಷಿಪ್ತ
ವಿದ್ಯುತ್ ನಿಲುಗಡೆ
ಮೈಸೂರು, ಜ.17:- ಎನ್.ಆರ್.ಮೊಹಲ್ಲಾ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ 11 ಕೆ.ವಿ. ಕೆ.ಎಂ.ಪಿ ಫೀಡರ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದ್ದು, 18.01.2019ರ ಶುಕ್ರವಾರ ಬೆಳಿಗ್ಗೆ 10 ರಿಂದ ಸಂಜೆ 6 ಘಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಅಶೋಕಪುರಂ 1ನೇ ಕ್ರಾಸ್ನಿಂದ 13ನೇ ಕ್ರಾಸ್ವರೆಗೆ, ಕೃಷ್ಣಮೂರ್ತಿ ಪುರಂ 1ನೇ ಕ್ರಾಸ್ನಿಂದ 6ನೇ ಕ್ರಾಸ್ವರೆಗೆ, ಸ್ಯಾಂಡಲ್ವುಡ್, ಬಲ್ಲಾಳ್ ಸರ್ಕಲ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ಎನ್.ಆರ್ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ. (ಕೆ.ಎಸ್,ಎಸ್.ಎಚ್)