ಸುದ್ದಿ ಸಂಕ್ಷಿಪ್ತ

ವಿದ್ಯುತ್ ನಿಲುಗಡೆ

ಮೈಸೂರು, ಜ.17:-  ಎನ್.ಆರ್.ಮೊಹಲ್ಲಾ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಹೊರಹೊಮ್ಮುವ11 ಕೆ.ವಿ. ವಾಟರ್ ವರ್ಕ್ಸ್, ‘ಬಿ’ ಸರ್ಕ್ಯೂಟ್ ಮತ್ತು ಆರ್.ಆರ್.ಫೀಡರ್‍ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ.

ಜನವರಿ 17 ರಂದು ಬೆಳಿಗ್ಗೆ 10.30ರಿಂದ ಸಂಜೆ 5.30 ರವರೆಗೆ ಕಾಳಮ್ಮ ಟೆಂಪಲ್ ಸ್ಟ್ರೀಟ್, ಧನ್ವಂತ್ರಿ ರಸ್ತೆ, ಕೆ.ಆರ್.ಆಸ್ಪತ್ರೆ ರಸ್ತೆ, ಒಲಂಪಿಯಾ ಟಾಕೀಸ್ ಸುತ್ತ-ಮುತ್ತ, ಮಕ್ಕಾಜಿ ಚೌಕ, ಗಾಂಧಿಚೌಕ, ಸೀಬಯ ರಸ್ತೆ, ಕೊತ್ವಾಲ್ ರಾಮಯ್ಯರಸ್ತೆ, ದೇವರಾಜ ಮಾರುಕಟ್ಟೆ, ಸಯ್ಯಾಜೀರಾವ್‍ರಸ್ತೆ, ಎರೇಕಟ್ಟೆ, ಪುಲಕೇಶಿ ರಸ್ತೆ, ಮಿಷನ್‍ಆಸ್ಪತ್ರೆ ವೃತ್ತ, ತುರಾಬಲಿ ರಸ್ತೆ, ವೆಸ್ಲಿ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಎನ್.ಆರ್ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: