ಮೈಸೂರು

ಬೋಗಾದಿಯ ಶ್ರೀ ರಾಧ ರಾಸ-ರಸರಾಂಭಿ ದೇವಸ್ಥಾನದಲ್ಲಿ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಗಸ್ಟ್ 25-26ರಂದು ಬೋಗಾದಿಯ ಶ್ರೀ ರಾಧ ರಾಸ-ರಸರಾಂಭಿ ದೇವಸ್ಥಾನದಲ್ಲಿ ಜಗದ್ ರಕ್ಷಕ ಶ್ರೀಕೃಷ್ಣನಿಗೆ ವಿಶೇಷ ಪೂಜೆ, ಆರತಿ, ಭಜನೆ, ಕಳಸಾಭಿಷೇಕ ಹಾಗೂ ಯಜ್ಞ ಜರುಗುವುದು.

ಜನ್ಮಾಷ್ಠಮಿ ಕಾರ್ಯಕ್ರಮವು ಬೆಳಿಗ್ಗೆ 5 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಡೆಯಲಿದ್ದು ಆಗಸ್ಟ್ 25ರ ಗುರುವಾರದ ಸಂಜೆ 5 ಗಂಟೆಗೆ ಮಕ್ಕಳಿಗೆ ಮಂತ್ರ ಪಠಣ ಸ್ಪರ್ಧೆ, ಹರಿನಾಮ ದೀಕ್ಷೆ, ಭಗವದ್ಗೀತೆ ಶ್ಲೋಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ, ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ರಾತ್ರಿ 8.30ಕ್ಕೆ ಕುಮಾರಿ ಶೃತಿಯಿಂದ ಭರತನಾಟ್ಯ,9ಕ್ಕೆ ‘ಕಂಸ ವಧೆ’ ನಾಟಕ ಪ್ರದರ್ಶನ ನಂತರ ನೀರಭರವರು ಶಾಸ್ತ್ರೀಯ ನೃತ್ಯ ಪ್ರಸ್ತುತ ಪಡಿಸುವರು.

ಆಗಸ್ಟ್ 26ರ ಶುಕ್ರವಾರದಂದು ಬೆಳಿಗ್ಗೆ ಐದು ಗಂಟೆಯಿಂದಲೇ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾಗಲಿವೆ. ಬೆಳಿಗ್ಗೆ 8.30ಕ್ಕೆ ಭಾಗವತದಿಂದ ನೈಜ ಧರ್ಮದ ಬಗ್ಗೆ ಉಪನ್ಯಾಸ ನಡೆಯುವುದು.

ಅಂದು ಸಂಜೆ 6 ಗಂಟೆಗೆ ಮಕ್ಕಳಿಂದ ಮಹಾಭಾರತದ ರಸಪ್ರಶ್ನೆ, 7 ಕ್ಕೆ  ಭರತನಾಟ್ಯ ನಂತರ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಈ ಎರಡು ದಿನಗಳ ಕಾಲ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದ್ದು ಭಕ್ತಾದಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳಬೇಕೆಂದು ದೇವಸ್ಥಾನದ ಸಂಸ್ಥಾಪಕ ಶ್ರೀಕೃಷ್ಣ ಚೈತನ್ಯ ಸ್ವಾಮಿಜಿ ಕೋರಿದ್ದಾರೆ.

 

Leave a Reply

comments

Related Articles

error: