ಮೈಸೂರು

ಜನ್ ಧನ್ ಖಾತೆಗೆ ಹಣ ಜಮಾ : ಮುದ್ರಣದಿಂದ ಪ್ರಮಾದ

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹೂ ಮಾರುವ ಮಹಿಳೆಯೊಬ್ಬರ ಜನ್‍ಧನ್ ಖಾತೆಗೆ ದಿಢೀರ್ ಆಗಿ 5 ಕೋಟಿ 10 ಲಕ್ಷ  ರೂ.ಹಣ ಜಮೆಯಾಗಿದೆ ಎಂದು ಪಾಸ್‍ಬುಕ್‍ನಲ್ಲಿ ಎಂಟ್ರಿಯಾಗಿದ್ದು ಕೆಲಕಾಲ ಗೊಂದಲಕ್ಕೆ ಕಾರಣವಾಗಿತ್ತು.

ಹುಲ್ಲಹಳ್ಳಿಯ ಕಾರ್ಪೊರೇಷನ್ ಬ್ಯಾಂಕ್‍ನಲ್ಲಿ ನಾಗರಾಜು ಎಂಬುವರ ಪತ್ನಿ ನೀಲಾ ಜನ್ ಧನ್ ಖಾತೆ ತೆರೆದಿದ್ದರು. ಗುರುವಾರ ಪರ್ಸನಲ್ ಲೋನ್ ಬಗ್ಗೆ ವಿಚಾರಿಸಲು ತೆರಳಿದಾಗ ಈ ಹಣ ಜಮಾ ಆಗಿರುವುದು ಗೊತ್ತಾಗಿದೆ. ಭಾರೀ ಹಣ ಜಮೆಯಾದ ವಿಚಾರ ತಿಳಿದು ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ವೇಳೆ ಮುದ್ರಣ ದೋಷದಿಂದ ಪ್ರಮಾದವಾಗಿರುವ ಮಾಹಿತಿ ದೊರಕಿದ್ದು, ಗೊಂದಲಕ್ಕೆ ಪರಿಹಾರ ದೊರಕಿದೆ.

Leave a Reply

comments

Related Articles

error: