ಮೈಸೂರು

ಪೂರ್ವಸಿದ್ಧತೆಯಿಲ್ಲದೇ ಅಪ್ರಜಾತಾಂತ್ರಿಕವಾಗಿ ತರಾತುರಿಯಲ್ಲಿ ಜಾರಿಗೆ ತಂದಿರುವ ಸಿಬಿಸಿಎಸ್ ಕೈಬಿಡಲು ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಜ.17:- ಮೈಸೂರು ವಿಶ್ವವಿದ್ಯಾನಿಲಯವು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆಅವೈಜ್ಞಾನಿಕವಾದ ಸಿಬಿಸಿಎಸ್ ಶೈಕ್ಷಣಿಕ ಪದ್ಧತಿಯನ್ನು ಅಪ್ರಜಾತಾಂತ್ರಿಕವಾಗಿ ಯಾವುದೇ ಪೂರ್ವ ಸಿದ್ಧತೆಯಿಲ್ಲದೇ ಜಾರಿಗೆ ತಂದಿದ್ದು ಇದರಿಂದ ಅನೇಕ ಗೊಂದಲಗಳು ಸೃಷ್ಟಿಯಾಗಿವೆ. ಈ ಪದ್ಧತಿಯ ಬಗ್ಗೆ ವಿದ್ಯಾರ್ಥಿಗಳಿಗಾಗಲೀ, ಅಧ್ಯಾಪಕರಿಗಾಗಲಿ ಅಥವಾ ಇದನ್ನು ಜಾರಿಗೆ ತಂದಂತಹ ವಿವಿಯ ಅಧಿಕಾರಿಗಳಿಗಾಗಲೀ ಯಾವುದೇ ರೀತಿಯ ಸ್ಪಷ್ಟ ತಿಳುವಳಿಕೆಯಿಲ್ಲ. ಅದರೊಂದಿಗೆ ಫಲಿತಾಂಶದ ಪ್ರಕಟಣೆಯು ಅನೇಕ ವೈಪರೀತ್ಯಗಳು ಮತ್ತು ಗೊಂದಲಗಳಿಂದ ಕೂಡಿದೆ ಎಂದು ಆರೋಪಿಸಿ, ಪದ್ಧತಿ ವಿರೋಧಿಸಿ ಎಐಡಿಎಸ್ ಒ ಮತ್ತು ಎಐಡಿವೈಒ ವತಿಯಿಂದ ಪ್ರತಿಭಟನೆ ನಡೆಯಿತು.

ವಿವಿಯ ಕಾರ್ಯಸೌಧದ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಮಡ ಪ್ರತಿಭಟನಾಕಾರರು ಮಾತನಾಡಿ ಸಿಬಿಸಿಎಸ್ ವಿವಿಯು ಶೈಕ್ಷಣಿಕ ತಜ್ಞರಿರುವ ಅಕಾಡೆಮಿಕ್ ಕೌನ್ಸಿಲ್ ಮತ್ತು ಸಿಂಡಿಕೇಟ್ ಸಭೆಯ ಅನುಮೋದನೆಯನ್ನೇ ಪಡೆದಿಲ್ಲ. ತಜ್ಞರ, ಪ್ರಾಧ್ಯಾಪಕರ ಮತ್ತು ವಿದ್ಯಾರ್ಥಿ, ಪೋಷಕರ ಅಭಿಪ್ರಾಯ ಪಡೆಯದೇ ಜಾರಿಗೊಳಿಸಲಾಗಿದೆ. ವಿದ್ಯಾರ್ಥಿಗಳು ಕನಿಷ್ಟ ತೇಗರ್ಡೆಯಾಗಲು ಗಳಿಸಬೇಕಾದ ಕನಿಷ್ಟ ಅಂಕ, ಉತ್ತೀರ್ಣನಾಗಲು ಒಬ್ಬ ವಿದ್ಯಾರ್ಥಿಗೆ ಇರುವ ಅವಕಾಶಗಳು ಪರೀಕ್ಷಾ ನೋಂದಣಿ ವಿಧಾನ ಇತ್ಯಾದಿ ಮೂಲಭೂತ ಅಂಕಗಳ ಬಗ್ಗೆ ಈ ಪದ್ಧತಿಯನ್ನು ಜಾರಿಗೊಳಿಸಬೇಕಾದ ವಿವಿಯ ಉನ್ನತಾಧಿಕಾರಿಗಳಲ್ಲೇ ಗೊಂದಲವಿದೆ. ಸ್ಪಷ್ಟತೆಯಿಲ್ಲ. ಸಿಬಿಸಿಎಸ್ ಜಾರಿಯಿಂದ ಫಲಿತಾಂಶದಲ್ಲಾಗಿರುವ ದೋಷಗಳನ್ನು ಸರಿಪಡಿಸಿ ಮರು ಫಲಿತಾಂಶ ನೀಡಿ, ಯಾವುದೇ ಪೂರ್ವಸಿದ್ಧತೆಯಿಲ್ಲದೇ ಅಪ್ರಜಾತಾಂತ್ರಿಕವಾಗಿ ತರಾತುರಿಯಲ್ಲಿ ಜಾರಿಗೆ ತಂದಿರುವ ಸಿಬಿಸಿಎಸ್ ಕೈಬಿಡಿ, ತೇರ್ಗಡೆಯಾಗದ ವಿಷಯಗಳನ್ನು ಮತ್ತೆ ಬರೆಯಲು ಇರುವ ಅವಕಾಶಗಳ ಕುರಿತಾದ ಗೊಂದಲಗಳನ್ನು ನಿವಾರಿಸಿ, ಮರುಮೌಲ್ಯಮಾಪನಕ್ಕೆ ಸಂಬಂಧಿಸಿದ ಎಲ್ಲಾ ದುಬಾರಿ ಶುಲ್ಕಗಳನ್ನು ಕೈಬಿಡಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷರಾದ ಎಂ.ಉಮಾದೇವಿ, ಹರೀಶ್ ಎಸ್.ಎಚ್, ಕಾರ್ಯದರ್ಶಿ ಸುನೀಲ್, ಸುಮ, ಕಲಾವತಿ, ಅನಿಲ್, ಆಕಾಶ್ ಕುಮಾರ್, ಚಂದ್ರಕಲಾ, ಆಸಿಯಾ ಬೇಗಂ, ಸೌಮ್ಯ ಕೇಶವ್,ಮಂಜು ಮಹೇಂದ್ರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: