ಮೈಸೂರು

ಕ್ರೀಡಾ ಆಸಕ್ತಿ ಕ್ಷೀಣಿಸುತ್ತಿದೆ : ಡಾ.ಹೆಚ್.ಟಿ.ಶೇಖರ್ ವಿಷಾದ

ಕ್ರೀಡಾ ಆಸಕ್ತಿ ಇತ್ತಿಚ್ಚಿನ ದಿನಗಳಲ್ಲಿ  ಕ್ಷೀಣಿಸುತ್ತಿದೆ. ತಂತ್ರಜ್ಞಾನ ದಲ್ಲಿ ಹೆಚ್ಚಿನ ಗಮನ ಹರಿಸಿರುವ ಕಾರಣ ಗ್ರಾಮೀಣ ಭಾಗದ ಕ್ರೀಡೆಗಳು ಕೂಡ ಕಾಣುತ್ತಿಲ್ಲ ಎಂದು ನಗರ ಪೊಲೀಸ್ ಉಪ ಆಯುಕ್ತ ಡಾ.ಹೆಚ್.ಟಿ.ಶೇಖರ್ ವಿಷಾದ ವ್ಯಕ್ತಪಡಿಸಿದರು.

ವಿಶ್ವಮಾನವ ಮೈಸೂರು, ವಿಶ್ವವಿದ್ಯಾಲಯ ನೌಕರರ ವೇದಿಕೆ ವತಿಯಿಂದ ಕುವೆಂಪು ಜಯಂತಿ ಪ್ರಯುಕ್ತ ಮೈಸೂರಿನ ಪೆವಿಲಿಯನ್ ಗ್ರೌಂಡ್ ನಲ್ಲಿ ನಡೆದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಗ್ರಾಮೀಣ ಕ್ರೀಡೆಗಳನ್ನು ನೋಡಬೇಕು ಎಂದರೆ ನಗರದಲ್ಲಿ ಆಯೋಜನೆ ಮಾಡಿದಾಗ ಮಾತ್ರ  ಅಂತಹ ಕ್ರೀಡೆಗಳನ್ನು ನೋಡಬಹುದಾಗಿದೆ. ಈ ರೀತಿಯ ಕ್ರೀಡಾಕೂಟಗಳ ಆಯೋಜನೆಗಳು ಯುವ ಪೀಳಿಗೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ಅತಿಥಿಗಳಾಗಿ ಆಗಮಿಸಿದ ರವಿಕೋಟಿ ಮಾತನಾಡಿ ಈ ರೀತಿಯ ಕಾರ್ಯಕ್ರಮ ಆಯೋಜನೆ ಬಹಳ ಕಷ್ಟ. ವ್ಯಾಯಾಮ ಅಂದರೆ ಬೇಸರ ಆಗಬಹುದಾದರೂ, ಕ್ರಿಕೆಟ್ ಎಂದರೆ ಸಾಕು ಯಾರೆ ಆಗಲಿ ಎಲ್ಲಿದ್ದರು ಓಡಿ ಬರುತ್ತೇವೆ. ಆರೋಗ್ಯ ಬಹು ಮುಖ್ಯವಾಗಿದೆ ಎಂದು ತಿಳಿಸಿದರು.

ಪಂದ್ಯದಲ್ಲಿ ಪೊಲೀಸ್ ತಂಡ, ದೈಹಿಕ ಶಿಕ್ಷಣ ವಿಭಾಗ ತಂಡಗಳು ಸೇರಿದಂತೆ 2೦ ತಂಡಗಳು ಭಾಗಿಯಾಗಿವೆ.
ದಿನವೊಂದಕ್ಕೆ 5 ಪಂದ್ಯಗಳು ನಿಗದಿಯಾಗಿದೆ.

ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

comments

Related Articles

error: