
ಪ್ರಮುಖ ಸುದ್ದಿಮೈಸೂರು
ದೇಶ-ವಿದೇಶಿ ವಿದ್ವಾಂಸರ ಸಮಾಗಮದಲ್ಲಿ ‘ಗ್ರ್ಯಾಂಡ್ ವರ್ಲ್ಡ್ ಮ್ಯೂಸಿಕ್ ಕಾನ್ಸರ್ಟ್’ ನಾಳೆ
ಮೈಸೂರು,ಜ.17 : ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ, ಮೂಕಾಂಬಿಕಾ ಕ್ರಿಯೇಷನ್ ಸಂಯುಕ್ತಾಶ್ರಯದಲ್ಲಿ ರಾಷ್ಟ್ರ- ಅಂತರಾಷ್ಟ್ರ ಸಂಗೀತಗಾರರ ‘ಗ್ರ್ಯಾಂಡ್ ವರ್ಲ್ಡ್ ಮ್ಯೂಸಿಕ್ ಕಾನ್ಸರ್ಟ್’ ಅನ್ನು ಕುವೆಂಪುನಗರದ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಆವರಣದಲ್ಲಿ ಏರ್ಪಡಿಸಲಾಗಿದೆ.
ನಾಳೆ ದಿ.18ರಂದು ಸಂಜೆ 6 ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಬಯಲುಕುಪ್ಪೆಯ ಸಮಟೆನ್ ಲಿಂಗಪ ಕರ್ಮ ರಿನ್ ಪೋಚಿ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಎನ್.ವೈ.ಎಂ.ಕೆ ರಾಜ್ಯ ನಿರ್ದೇಶಕ ಎಂ.ಎನ್.ನಟರಾಜ್ ಅವರು ಉಪಸ್ಥಿತರಿರುವುದಾಗಿ ಮೂಕಾಂಬಿಕಾ ಕ್ರಿಯೇಷನ್ ನ ವ್ಯವಸ್ಥಾಪಕ ಪರಮೇಶ್ವರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಯೊಲಿನ್ ವಾದಕ ಡಾ.ಮೈಸೂರು ಮಂಜುನಾಥ್, ಹಾಲೆಂಡ್ ನ ಪುಲ್ ವಿಯೋ ಸಿಗುರ್ತಾ ಟ್ರಂಪೇಟ್, ಲಂಡನ್ ಅಲೈಸ್ ಬರೂನ್ ವಿದೇಶಿ ವಯೊಲಿನ್, ಇಟಲಿಯ ಗಿಲಿಲಯೋ ಮೆಡಾರಲ್ಲಿ ಗಿಟಾರ್, ಬಿ.ಸಿ.ಮಂಜುನಾಥ್ ಮೃದಂಗ, ಪ್ರಥಮ್ ಕಿರಣ್ ಸ್ಪೆಷಲ್ ಪರ್ಕೂಸನ್, ವಿವೇಕ್ ಸಂತೋಷ್ ಪಿಯಾನೋದ ಮೂಲಕ ಸಂಗೀತ ಗೋಷ್ಠಿ ನಡೆಸಿಕೊಡಲಿದ್ದು, ಮಲೆನಾಡು ಮತ್ತು ಕರಾವಳಿ ತಿನಿಸುಗಳು ಲಭ್ಯವಿರಲಿವೆ ಎಂದು ತಿಳಿಸಿದರು.
ಮಾಲತೇಶ್, ಸಾನಿಯಾ, ರಾಜೇಶ್, ಡಾ.ನಾರಾಯಣ ಹೆಗಡೆ ಮೊದಲಾದವರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)