ಮನರಂಜನೆ

`ಪೈಲ್ವಾನ್’ ಟೀಸರ್ ನೋಡಿ ಟ್ವಿಟ್ ಮಾಡಿದ ಕುಮಾರ್ ಬಂಗಾರಪ್ಪ

ಬೆಂಗಳೂರು,ಜ.17-ನಟ ಕಿಚ್ಚ ಸುದೀಪ್ ಅಭಿನಯದ `ಪೈಲ್ವಾನ್’ ಸಿನಿಮಾ ಟೀಸರ್ ನೋಡಿ ನಟ ಹಾಗೂ ಶಾಸಕ ಕುಮಾರ್ ಬಂಗಾರಪ್ಪ ಟ್ವಿಟ್ ಮಾಡಿದ್ದಾರೆ.

‘ಅದ್ಬುತ ಹಾಗೂ ಅದ್ಧೂರಿಯಾದ ಟೀಸರ್. ನಿಮ್ಮ ಡೆಡಿಕೇಶನ್ ಗೆ ಬೆಲೆ ಸಿಕ್ಕಿದೆ. ನಿಮಗೆ ಹಾಗೂ ನಿಮ್ಮ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್. ಸಿನಿಮಾ ಯಶಸ್ವಿಯಾಗಲಿ’ ಎಂದು ಅವರು ಟ್ವಿಟ್ ಮಾಡಿದ್ದಾರೆ.

ಕುಮಾರ್ ಬಂಗಾರಪ್ಪ ಹಾಗೂ ಸುದೀಪ್ ಒಳ್ಳೆಯ ಒಡನಾಟ ಹೊಂದಿದ್ದು, ಇತ್ತೀಚಿಗಷ್ಟೆ ಸುದೀಪ್ ಅವರನ್ನು ಕುಮಾರ್ ಬಂಗಾರಪ್ಪ ಅವರ ಮಗ ಭೇಟಿ ಮಾಡಿದ್ದರು.

‘ಪೈಲ್ವಾನ್’ ಟೀಸರ್ ಎರಡು ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಕೇವಲ 3 ಗಂಟೆ 58 ನಿಮಿಷಕ್ಕೆ ಟೀಸರ್ 1 ಮಿಲಿಯನ್ ದಾಟಿದ ಹೆಗ್ಗಳಿಕೆ ಪಡೆದುಕೊಂಡಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್, ರಿತೇಶ್ ದೇಶ್ ಮುಖ್, ಕಾಲಿವುಡ್ ನಟ ಧನುಷ್, ಪ್ರಭುದೇವ, ಟಾಲಿವುಡ್ ನಟ ಸಿದ್ಧಾರ್ಥ್ ಹೀಗೆ ಅನೇಕರು ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಹೆಬ್ಬುಲಿ’ ಕೃಷ್ಣ ಈ ಸಿನಿಮಾದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಕಿಚ್ಚನ ಜೋಡಿಯಾಗಿ ಹಿಂದಿ ನಟಿ ಆಕಾಂಕ್ಷ ಸಿಂಗ್ ಅಭಿನಯಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: