ಮೈಸೂರು

ರಸ್ತೆ ಸುರಕ್ಷಾ ಜಾಗೃತಿ ಜಾಥಾ

ಮೈಸೂರಿನ  ಕಲ್ಯಾಣಗಿರಿ ಆರ್ ಟಿ ಓ ಕಚೇರಿಯಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ  ಸಾರ್ವಜನಿಕ ರಸ್ತೆ ಸಾರಿಗೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಥಾವನ್ನು ಹಮ್ಮಿಕೊಳ್ಳಾಗಿತ್ತು.
ಸುಗಮ ಸಂಚಾರ ನಮ್ಮೆಲ್ಲರ ಕರ್ತವ್ಯ, ಹೆಲ್ಮೆಟ್ ಧರಿಸಿ ವಾಹನ ಚಲಿಸಿ, ಸಂಚಾರಿ ನಿಯಮ ಪಾಲಿಸಿ  ಎಂಬಿತ್ಯಾದಿ ನಾಮಫಲಕಗಳನ್ನು ಹಿಡಿದು ಅಧಿಕಾರಿಗಳು ನಗರದಲ್ಲಿ ಜನರಿಗೆ ಅರಿವು ಮೂಡಿಸಿದರು.  ಕಲ್ಯಾಣಗಿರಿ ಆರ್ ಟಿ ಒ ಕಚೇರಿ ಮುಂಭಾಗದಿಂದ ಹೊರಟ ಜಾಥಾ ರಾಜ್ ಕುಮಾರ್ ರಸ್ತೆ ಮೂಲಕ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಟೆರಿಷಿಯನ್ ವೃತ್ತದ ಮೂಲಕ ಮತ್ತೆ ಆರ್ ಟಿ ಓ ಕಚೇರಿ ತಲುಪಿತು.

ಜಾಗೃತಿ ಜಾಥಾದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ, ಮೋಟಾರು ವಾಹನ ಅಧೀಕ್ಷಕ ಶಿವಪ್ರಸಾದ್, ಲೋಲಾಮಣಿ, ಮೋಟಾರು ವಾಹನ ನಿರೀಕ್ಷಕರು ಹಾಗೂ ಸಿಬ್ಬಂದಿ ವರ್ಗ, ಚಾಲನಾ ತರಬೇತಿ ಶಾಲೆ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Reply

comments

Related Articles

error: