ಸುದ್ದಿ ಸಂಕ್ಷಿಪ್ತ

ಜ.20 ರಂದು ದಶಮಾನೋತ್ಸವ ಸಮಾರಂಭ

ಮೈಸೂರು,ಜ.17-ಸಮುದ್ಯತಾ ಶ್ರೋತೇಗಳ ಸಂಘ, ಮೈಸೂರು ಆಕಾಶವಾಣಿ ಕೇಳುಗರ ಬಳಗವು ತನ್ನ 10ನೇ ವಾರ್ಷಿಕೋತ್ಸವದ ಅಂಗವಾಗಿ ಜ.20 ರಂದು ಬೆಳಿಗ್ಗೆ 9.30ಕ್ಕೆ ನಗರದ ಜೆಎಲ್ ಬಿ ರಸ್ತೆಯಲ್ಲಿರುವ ರೋಟರಿ ಜಾವ ಸಭಾಂಗಣದಲ್ಲಿ ದಶಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ.

ಮುಖ್ಯ ಅತಿಥಿಗಳಾಗಿ ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕ ಎಚ್.ಶ್ರೀನಿವಾಸ್, ನಿವೃತ್ತ ಪ್ರಾಧ್ಯಾಪಕರಾದ ಡಾ.ಲಕ್ಷ್ಮೀನಾರಾಯಣ ಆರೋರ ಅವರು ಆಗಮಿಸಲಿದ್ದಾರೆ.

ಬೆಂಗಳೂರು ವಿವಿಧ ಭಾರತಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿಷ್ಪಾದಕ ಎಂ.ಶಿವಕುಮಾರ್, ಮೈಸೂರು ಆಕಾಶವಾಣಿ ಕೇಂದ್ರದ ಕೃಷಿ ರಂಗ ವಿಭಾಗದ ಕಾರ್ಯಕ್ರಮ ನಿರ್ವಾಹಕ ಎನ್.ಕೇಶವಮೂರ್ತಿ, ಮೈಸೂರು ಆಕಾಶವಾಣಿ ಕೇಂದ್ರದ ಹಂಗಾಮಿ ಉದ್ಘೋಷಕರಾದ ಆರ್.ಲೋಕೇಶ್ವರಿ ಅವರನ್ನು ಸನ್ಮಾನಿಸಲಾಗುವುದು. ಜತೆಗೆ ಪ್ರತಿಭಾ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು. (ಎಂ.ಎನ್)

Leave a Reply

comments

Related Articles

error: