ಕರ್ನಾಟಕ

ಚೇಳು ಕಚ್ಚಿದ 14 ವರ್ಷದ ಬಾಲಕ ಸಾವು

ಹುಬ್ಬಳ್ಳಿ (ಜ.17): ಚೇಳು ಕಚ್ಚಿದ 14 ವರ್ಷದ ಬಾಲಕನಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದ ಪರಿಣಾಮ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕುಷ್ಠಗಿ ತಾಲೂಕಿನ ನವಲಹಳ್ಳಿ ಗ್ರಾಮದ ಮಲ್ಲಪ್ಪ ಛಲವಾದಿ ಮೃತ ಬಾಲಕ. ಜನವರಿ 12 ರಂದು ಬಾಲಕನ ಮನೆಯಲ್ಲಿ ಆತನಿಗೆ ಚೇಳು ಕಚ್ಚಿತ್ತು, ಚೇಳು ಕಚ್ಚಿದೆ ಎಂಬ ಅರಿವು ಬಾಲಕನಿಗೆ ಇರಲಿಲ್ಲ. ಆದರೆ ನೋವು ಹೆಚ್ಚಾದಾಗ ಆತ ಪೋಷಕರಿಗೆ ತಿಳಿಸಿದ್ದ.

ನಂತರ ಆತನನ್ನು ತಾವರಗೇರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷೆ ಮಾಡಿದ ಅಲ್ಲಿನ ವೈದ್ಯರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದರು. ಅಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ, ಬಾಲಕನಿಗೆ ವಿಷ ನಿರೋಧಿಸುವ ಇಂಜೆಕ್ಷನ್ ನೀಡಿದ್ದರೇ ಬಾಲಕ ಬದುಕುತ್ತಿದ್ದ ಎಂದು ವೈದ್ಯರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: