ದೇಶಪ್ರಮುಖ ಸುದ್ದಿ

ಏಕಾಂಗಿಯಾಗಿ ಯುದ್ಧ ವಿಮಾನ ಹಾರಿಸಿ ಸೈ ಎನಿಸಿಕೊಂಡ ವಾಯುಪಡೆ ಮುಖ್ಯಸ್ಥ

ನವದೆಹಲಿ: ಭಾರತೀಯ ವಾಯುಪಡೆ ಮುಖ್ಯಸ್ಥ ಬಿ.ಎಸ್. ಧನೋವ್ ಅವರು ಏಕಾಂಗಿಯಾಗಿ ಮಿಗ್-21 ಯುದ್ಧ ವಿಮಾನವನ್ನು ಹಾರಾಟ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ರಾಜಸ್ಥಾನದ ಉತ್ತರ್ ಲೈ ವಾಯುಪಡೆಗೆ ಗುರುವಾರ ಭೇಟಿ ನೀಡಿದ್ದ ವಾಯುಪಡೆ ಮುಖ್ಯಸ್ಥ ಬಿ.ಎಸ್‌.ಧನೋವ್‌ ಅವರು, ಏಕಾಂಗಿಯಾಗಿ ಭಾರತೀಯ ವಾಯುಪಡೆಯ ಅತ್ಯಂತ ಹಳೆಯ “ಮಿಗ್‌-21′ ಯುದ್ಧ ವಿಮಾನವನ್ನು ಚಾಲನೆ ಮಾಡಿದ್ದಾರೆ.

ಭಾರತೀಯ ವಾಯುಪಡೆ ಇತಿಹಾಸದಲ್ಲಿ ಇದು ಅಪರೂಪದ ಘಟನೆಯಾಗಿದ್ದು, ಸೇನಾ ಮುಖ್ಯಸ್ಥರೊಬ್ಬರು ಏಕಾಂಗಿಯಾಗಿ ಯುದ್ಧ ವಿಮಾನವನ್ನು ಹಾರಾಟ ನಡೆಸಿರುವುದು ಇದೇ ಮೊದಲು ಎನ್ನಲಾಗಿದೆ.

ಈ ಹಿಂದೆ ಇದೇ ಧನೋವ್ ಅವರು ಕಾರ್ಗಿಲ್ ಯುದ್ಧದ ಸಂದರ್ಭ ಇದೇ ಮಾದರಿಯ ಯುದ್ಧ ವಿಮಾನಗಳ ಹಾರಾಟವನ್ನು ನಡೆಸಿದ್ದರು.

ಬಿಎಸ್ ಧನೋವ್ ಅವರು ವಾಯುಪಡೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಈ ರೀತಿ ಏಕಾಂಗಿಯಾಗಿ ಯುದ್ಧವಿಮಾನ ಹಾರಾಟ ನಡೆಸಿದ್ದಾರೆ. ಆ ಮೂಲಕ ಮಿಗ್-21 ಯುದ್ಧ ವಿಮಾನ ಸುರಕ್ಷಿತವಾಗಿದೆ ಎಂದು ಬಿ.ಎಸ್. ಧನೋವ್ ಅವರು ಪರೋಕ್ಷವಾಗಿ ಸಂದೇಶ ಸಾರಿದ್ದಾರೆ.

Leave a Reply

comments

Related Articles

error: