ಕರ್ನಾಟಕಮೈಸೂರು

ಬೈಲಕುಪ್ಪೆ: ತ್ಯಾಜ್ಯ ತೆಗೆದು ಬಾವಿ ಸ್ಚಚ್ಛಗೊಳಿಸಿದ ಅನಿ ಗೆಳೆಯರ ಬಳಗ

ಬೈಲಕುಪ್ಪೆಯ ವೆಂಕಟೇಶ್ ಬಡಾವಣೆಯಲ್ಲಿರುವ ಸುಮಾರು 60 ವರ್ಷ ಹಿಂದಿನ ಕಾಲದ ಬಾವಿಯೊಂದರಲ್ಲಿ ತುಂಬಿ ತುಳುಕಾಡುತ್ತಿದ್ದ ತ್ಯಾಜ್ಯ ವಸ್ತುಗಳನ್ನು ಮೇಲೆತ್ತಿ ಬಾವಿಯನ್ನು ಸ್ವಚ್ಛಗೊಳಿಸಲಾಯಿತು. ಹಗ್ಗಕ್ಕೆ ಕಟ್ಟಿದ ಹಲಗೆ ಸಹಾಯದಿಂದ ಬಾವಿಯೊಳಗೆ ಇಳಿದ ಯುವಕರು, ಬಾವಿಯಲ್ಲಿದ್ದ ಕಸವನ್ನು ಬುಟ್ಟಿಗೆ ತುಂಬಿ 2 ದಿನಗಳ ಕಾಲ ಮೇಲೆತ್ತಿದರು.

ಬೈಲಕುಪ್ಪೆಯ ಅನಿ ಗೆಳೆಯರ ಬಳಗದ ವತಿಯಿಂದ ಏರ್ಪಡಿಸಿದ್ದ ಈ ಸ್ವಚ್ಛತಾ ಆಂದೊಲನದ ಅಂಗವಾಗಿ ಬಾವಿಯೊಳಗೆ ಅಡಗಿದ್ದ ಕಸಗಳನ್ನು ಹೊರತೆಗೆಯಲಾಯಿತು. ಶತಮಾನಗಳ ಹಿಂದೆ ತಾಯಂದಿರು ಮಕ್ಕಳಿಗೆ ಹಾಲೂಡುವಾಗ ಕೆರೆ, ಬಾವಿ ಕಟ್ಟಿಸು ಎಂದು ಹೇಳುತ್ತಿದ್ದರಂತೆ. ಕೆರೆ-ಕಟ್ಟೆ-ಬಾವಿಗಳೇ ಆಗ ಗ್ರಾಮಗಳಲ್ಲಿ ನೀರಿನ ಮೂಲಗಳಾಗಿದ್ದರಿಂದ ಕೆರೆ ಬಾವಿ ನಿರ‍್ಮಾಣ ಮಾಡುವುದು ಆಗ ಪುಣ್ಯದ ಕೆಲಸವಾಗಿತ್ತು. ಜಲಮೂಲ ಸಂರಕ್ಷಣೆಗೆ ನಮ್ಮ ಪೂರ‍್ವೀಕರು ಅಷ್ಟು ಮಹತ್ವ ನೀಡಿದ್ದರು.

ಕಾಲಮಾನ ಬದಲಾದಂತೆ ನಗರೀಕರಣ ಹೆಚ್ಚಾಗಿ, ಕೆರೆಗಳು ಮಾಯವಾಗಿವೆ. ಇನ್ನು ತೋಟ, ಹೋಲಗಳಲ್ಲಿದ್ದ ಪಾಳು ಬಾವಿಗಳನ್ನು ಮುಚ್ಚಾಲಾಗಿದೆ. ಆದರೂ ಕೆಲವೆಡೆ ಶತಮಾನಗಳ ಕಾಲ ಜನರಿಗೆ ನೀರುಣಿಸಿದ ಬಾವಿಗಳು ಇನ್ನೂ ಇವೆ ಎಂಬುದಕ್ಕೆ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯ ಪೋಲಿಸ್ ವಸತಿ ಗೃಹದಲ್ಲಿರುವ ಬಾವಿಯೆ ಸಾಕ್ಷೀ. ಈ ಬಾವಿ ಇಲ್ಲಿನ ಜನರಿಗೆ ದಶಕಗಳ ಕಾಲ ನೀರಿನ ಮೂಲವಾಗಿತ್ತು, ಬಳಿಕ ಕೊಳವೆ ಬಾವಿ, ನಲ್ಲಿಗಳು ಬಂದವು. ಈ ಕಾರಣದಿಂದ ಬಳಕೆ ಕಳೆದುಕೊಂಡ ಈ ಬಾವಿ ತ್ಯಾಜ್ಯ ವಸ್ತುಗಳಿಂದ ತುಂಬಿಹೋಗಿತ್ತು.

ಮಕ್ಕಳು ಈ ಕಡೆ ಬಂದಾಗ ಒಳಗೆ ಬೀಳಬಹುದಾದ ಅಪಾಯಕಾರಿ ಜಾಗವಾಗಿ ಬದಲಾಗಿತ್ತು. ಹೀಗಾಗಿ ಬೈಲಕುಪ್ಪೆಯ ಅನಿ ಗೆಳೆಯರ ಬಳಗವು ಬಾವಿಯನ್ನು ಸ್ವಚ್ಛಗೊಳಿಸಲು ನಿರ‍್ಧರಿಸಿ ಕಾರ‍್ಯೋನ್ಮುಖವಾಯಿತು. ಎರಡು ದಿನಗಳ ಕಾಲ ನಡೆದ ಕೆಲಸದಿಂದ ಬಾವಿಯಲ್ಲಿ ತುಂಬಿಹೋಗಿದ್ದ ತ್ಯಾಜ್ಯಗಳನ್ನು ಹೊರತೆಗೆಯಲಾಗಿದೆ.

ಜನಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಾವಿಯನ್ನು ಪರಿಶೀಲಿಸಿ ಬಳಕೆಗೆ ಸೂಕ್ತವಾಗುವ ರೀತಿಯಲ್ಲಿ ಬಾವಿಯನ್ನು ಕಾಪಾಡಬೇಕು ಮತ್ತು ಯಾವುದೇ ಅಪಾಯ ಸಂಭವಿಸದಂತೆ ಸೂಕ್ತ ತಡೆಗೋಡೆ ನಿರ‍್ಮಿಸಬೇಕು ಎಂದು ಅನಿಲ್ ಹಾಗೂ ಬಳಗದವರು ಮನವಿ ಮಾಡಿಕೊಂಡಿದ್ದಾರೆ.

img-20160919-wa0002-new

Leave a Reply

comments

Related Articles

error: