ಮೈಸೂರು

ಹಳೆ ಪದ್ಧತಿಯಲ್ಲೇ ಪಡಿತರವನ್ನು ನೀಡಲು ಒತ್ತಾಯ : ಪ್ರತಿಭಟನೆ

ರಾಜ್ಯ ಆಹಾರ  ಇಲಾಖೆಯು ಜಾರಿಗೆ ತರಲು ಹೊರಟಿರುವ ನಗದು ಕೂಪನ್ ವ್ಯವಸ್ಥೆಯು ರೇಷನ್ ಕಾರ್ಡ್ ದಾರರಿಗೆ ಅನುಕೂಲವಾಗುವ ಬದಲು ಅನ್ಯಾಯವಾಗುವ ರೀತಿ ಕಂಡು ಬರುತ್ತಿದೆ ಎಂದು ಆರೋಪಿಸಿ ಕರ್ನಾಟಕ ನಾಗರಿಕ ಆಹಾರ ಮತ್ತು ರೇಷನ್ ಕಾರ್ಡ್ ದಾರರ ಹಿತರಕ್ಷಣಾ ವೇದಿಕೆಯ ವತಿಯಿಂದ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು.

ಮೈಸೂರು ಗಾಂಧಿ ಸ್ಕ್ವೇರ್ ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ರೇಷನ್ ಕಾರ್ಡ್ ದಾರರು ಸರ್ಕಾರ ನಿಗದಿಪಡಿಸಿರುವ ಅಂಗಡಿಗಳಲ್ಲಿ ಇಲಾಖೆ ನೀಡುವ ನಗದು ಕೂಪನ್ ನ್ನು ನೀಡಿ ಮಾರುಕಟ್ಟೆ ದರದಲ್ಲೇ ಆಹಾರ ಖರೀದಿಸಬೇಕಾಗಿರುವುದರಿಂದ ಸರ್ಕಾರ ನೀಡುವ ನಗದು ವ್ಯವಸ್ಥೆಯು ಅಸಮರ್ಪಕವಾಗಿರುವುದರಿಂದ ಜನರಿಗೆ ತೊಂದರೆಯಾಗಲಿದೆ. ಅದರಿಂದ ಹಳೆ ಪದ್ಧತಿಯಲ್ಲೇ ಪಡಿತರವನ್ನು ಕೊಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಡಿ.ಸಿ.ಬಸವೇಶ್ವರ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಎಸ್.ರಾಜ್, ರಾಜ್ಯ ನಿರ್ದೇಶಕ ಎಂ.ಆರ್.ಉದಯಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: