ಪ್ರಮುಖ ಸುದ್ದಿ

ಆಸ್ತಿ ವಿವಾದ : ಗುಂಡು ಹಾರಿಸಿ ಕೊಲೆಗೆ ಯತ್ನ

ರಾಜ್ಯ(ಮಡಿಕೇರಿ)ಜ.18:- ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವ ಗುಂಡು ಹಾರಿಸಿರುವ ಘಟನೆ ಸೋಮವಾರಪೇಟೆ ಸಮೀಪದ ನಾಡ್ನಳ್ಳಿ ಗ್ರಾಮದಲ್ಲಿ ನಡೆದಿದೆ.

ನಾಡ್ನಳ್ಳಿ ಗ್ರಾಮದ ಉಪೇಂದ್ರ ಆರೋಪಿಯಾಗಿದ್ದು, ನಾಡ್ನಳ್ಳಿ ಗ್ರಾಮದ ಸೌಜನ್ಯ ಎಂಬುವರು ತಮ್ಮ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾರೆಂದು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿ ಉಪೇಂದ್ರನಿಗೆ ದೂರುದಾರರದ ಸೌಜನ್ಯ ಅತ್ತಿಗೆಯಾಗಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕೋವಿಯನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: