ಮೈಸೂರು

ಮೈಸೂರಿಗರಿಗೆ ಅಪಾಯದಂಚಿನಲ್ಲಿರುವ ರೆಂಬೆಕೊಂಬೆಗಳ ಭಯ‌ ಇನ್ಮುಂದೆ ಇಲ್ಲ : ಬಂದಿದೆ ಹೈಡ್ರಾಲಿಕ್ ಯಂತ್ರ

ಮೈಸೂರು,ಜ.18:- ಇನ್ಮುಂದೆ ಮೈಸೂರಿಗರಿಗೆ ಅಪಾಯದಂಚಿನಲ್ಲಿರುವ ರೆಂಬೆಕೊಂಬೆಗಳ ಭಯ‌ವಿಲ್ಲ. ಯಾಕೆಂದರೆ ರೆಂಬೆಕೊಂಬೆಗಳನ್ನು ಅಪಾಯವಿಲ್ಲದೆ ಕಿತ್ತು ಬಿಸಾಡಲು ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಮೈಸೂರಿಗೆ ಹೈಡ್ರಾಲಿಕ್ ಯಂತ್ರವೊಂದನ್ನು ತರಲಾಗಿದೆ.

ಸಾಂಸ್ಕೃತಿಕ ನಗರಿಯಲ್ಲಿ ಅಪಾಯದ ಅಂಚಿನಲ್ಲಿರುವ ಮರಗಳ ರೆಂಬೆಕೊಂಬೆಗಳನ್ನು ತೆರವುಗೊಳಿಸಲಿಕ್ಕೆ ಹೈಡ್ರಾಲಿಕ್ ಯಂತ್ರ ಬಂದಿದ್ದು, ನಗರ ಪಾಲಿಕೆಯಿಂದ ವಿನೂತನ ಪ್ರಯೋಗ ನಡೆದಿದೆ. ಸ್ವಚ್ಛ ಮೈಸೂರಿನಲ್ಲಿ ಸ್ವಚ್ಛತೆ ಜೊತೆಗೆ ಮರಗಳ ಸುರಕ್ಷತೆಗೆ ನಗರ ಪಾಲಿಕೆ ಆದ್ಯತೆ ಕೊಟ್ಟಿದ್ದು, ಒಬ್ಬನೇ ವ್ಯಕ್ತಿ ಹೈಡ್ರಾಲಿಕ್  ಯಂತ್ರ ನಿರ್ವಹಣೆ ಮಾಡಬಹುದಾಗಿದೆ. ಮೂವತ್ತು ಅಡಿಗಳ ಎತ್ತರಕ್ಕೂ ಹೋಗಿ ಯಾವುದೇ ಕೊಂಬೆಗಳಿಗೂ ಅಪಾಯವಾಗದೇ ಅಸುರಕ್ಷಿತ ಕೊಂಬೆಗಳನ್ನಷ್ಟೇ ಕತ್ತರಿಸುವ ಹೈಡ್ರಾಲಿಕ್ ಯಂತ್ರ ಇದಾಗಿದ್ದು, ಇದಕ್ಕೆ 20.61 ಲಕ್ಷ ರೂ ವೆಚ್ಚ ತಗುಲಿದೆ. ದೇಶದಲ್ಲಿ ಆರು ರಾಜ್ಯಗಳಲ್ಲಿ ಬಳಕೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಮೈಸೂರು ಮಹಾನಗರ ಪಾಲಿಕೆ ಹೈಡ್ರಾಲಿಕ್ ಯಂತ್ರ ಖರೀದಿಸಿದೆ. ಅಪಾಯದ ಅಂಚಿನಲ್ಲರುವ ರೆಂಬೆಕೊಂಬೆಗಳ ತೆರವಿನ ಸಂದರ್ಭ ಅನಾಹುತಗಳು ಸಂಭವಿಸುತ್ತಿದ್ದರಿಂದ, ಅಪಾಯರಹಿತ ಯಂತ್ರ ಖರೀದಿಸಿದ್ದು, 360 ಡಿಗ್ರಿ ರೋಟೆಟ್ ಆಗುವ ಮೂಲಕ ಮರಗಳ ಕೊಂಬೆ ಕತ್ತರಿಸಲಿದೆ. ಮರದ ರೆಂಬೆಕೊಂಬೆಗಳಷ್ಟೇ ಅಲ್ಲದೆ ಮೂವತ್ತು ಅಡಿ ಎತ್ತರದ ಕಟ್ಟಡ ಏರುವುದಕ್ಕೂ ಈ ಯಂತ್ರವನ್ನು ಬಳಕೆ ಮಾಡಬಹುದಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: