ಮೈಸೂರು

ವಿನಾಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಸ್ಥೆ ವತಿಯಿಂದ ಏ.14 ಸರಳ ವಿವಾಹ

ಮೈಸೂರು,ಜ.18:-  ಡಾ.ಬಿ.ಆರ್.ಅಂಬೇಡ್ಕರ್ ಅವರ 128 ನೇ ಜಯಂತಿ ಹಿನ್ನೆಲೆಯಲ್ಲಿ ವಿನಾಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಸ್ಥೆ ವತಿಯಿಂದ ಸರಳ ವಿವಾಹ ಯೋಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ  ಸಂಸ್ಥೆಯ ಅಧ್ಯಕ್ಷ ಆನಂದ ಮೂರ್ತಿ ಅವರು ಏಪ್ರಿಲ್ 14 ರಂದು ಸರಳ ವಿವಾಹ ನಡೆಯಲಿದೆ. ಆಡಂಬರ ವೈಭವಯುತ, ವರದಕ್ಷಿಣೆ, ದುಂದು ವೆಚ್ಚ ತಡೆಗಟ್ಟುವ ಉದ್ದೇಶದಿಂದ ಸರಳ ವಿವಾಹ ಆಯೋಜಿಸಿದ್ದು, ಪರಿಶಿಷ್ಟ ಜಾತಿಗೆ ( SC ) ಸೇರಿದ ವಿವಾಹಾಕಾಂಕ್ಷಿಗಳು 1001 ರೂ. ಕೊಟ್ಟು ಹೆಸರು ನೋಂದಾಯಿಸಿಕೊಳ್ಳಬಹುದು. ಸೂಕ್ತ ದಾಖಲೆಗಳೊಂದಿಗೆ ನೋಂದಣಿ ಮಾಡಿಸಿಕೊಳ್ಳಬೇಕು. ವರನಿಗೆ 21 ವರ್ಷ, ವಧುವಿಗೆ 18ವರ್ಷ ತುಂಬಿರಬೇಕು.  ವಾರ್ಷಿಕ ಆದಾಯ 2ಲಕ್ಷ ಮೀರಿರಬಾರದು, ವಧುವರರು ಕಡ್ಡಾಯವಾಗಿ ಗುರುತಿನ ವಾಸಸ್ಥಳ ಆಧಾರ್ ಪತ್ರವನ್ನು ಸಲ್ಲಿಸಬೇಕು ಎಂದರು.

ವಧು,ವರರಿಗೆ ವಸ್ತ್ರ,ಮಾಂಗಲ್ಯ ನೀಡಲಾಗುವುದು. ಬೌದ್ಧ ಧರ್ಮದ ಅನುಸಾರ ಧರ್ಮ ಗುರುಗಳ ಆರ್ಶಿರ್ವಾದದೊಂದಿಗೆ ಸರಳ ವಿವಾಹ ನಡೆಯಲಿದ್ದು, ಫೆಬ್ರವರಿ 28 ನೋಂದಣಿಗ ಕಡೆಯ ದಿನ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರೇವಣ್ಣ,ಶ್ರೀಕಂಠ ಮೂರ್ತಿ, ಮಾದಯ್ಯ,ಪಾಪಣ್ಣ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: