ಮೈಸೂರು

ಯುವತಿ ಅನುಮಾನಾಸ್ಪದ ಸಾವು : ನಂಜನಗೂಡಿನಲ್ಲಿ ನಡೆಯಿತೇ ಮತ್ತೊಂದು ಮರ್ಯಾದಾ ಹತ್ಯೆ?

ಮೈಸೂರು,ಜ.18:- ಪ್ರೀತಿಸಿ ಮದುವೆಯಾಗಲು ಮುಂದಾಗಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ನಂಜನಗೂಡಿನಲ್ಲಿ ಮತ್ತೊಂದು ಮರ್ಯಾದೆ ಹತ್ಯೆ ನಡೆದಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ನಂಜನಗೂಡು ತಾಲೂಕಿನ ಕೂಗಲೂರು ಗ್ರಾಮದ ಕಾಳನಾಯಕ ಮತ್ತು ನಾಗಮ್ಮ ಎಂಬವರ ಪುತ್ರಿ ಸವಿತಾ(25)  ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ನಂಜನಗೂಡು ಕೂಗಲೂರು ಮತ್ತು ಕಸುವಿನಹಳ್ಳಿ ಬಳಿ ಶವ ಪತ್ತೆಯಾಗಿದೆ. ಮುಖ್ಯ ರಸ್ತೆಯ ಜಮೀನಿನಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದ್ದು, ಈಕೆ ಅನ್ಯ ವರ್ಗದ ಯುವಕನನ್ನು ಪ್ರೀತಿಸಿದ್ದಳು ಎನ್ನಲಾಗಿದೆ. ಬೆಂಗಳೂರಿನಲ್ಲಿ ನರ್ಸಿಂಗ್ ತರಬೇತಿ ಮಾಡಿದ್ದು, ಒಂದು ತಿಂಗಳ ಹಿಂದೆ ಗ್ರಾಮಕ್ಕೆ ಆಗಮಿಸಿದ್ದಳು. ಕೂಗಲೂರು ಗ್ರಾಮದ ಗೌರಮ್ಮ ಅವರ ಪುತ್ರ ಶಂಕರ್ ಎಂಬ ಅನ್ಯ ವರ್ಗದ ಯುವಕನನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಳು.  ಪ್ರೀತಿ, ಪ್ರೇಮಕ್ಕೆ ಜಾತಿ ಅಡ್ಡ ಬಂದ ಕಾರಣ ಮರ್ಯಾದೆ ಹತ್ಯೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ನಂಜನಗೂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: