ಮನರಂಜನೆಮೈಸೂರು

ಕನ್ನಡ ಚಲನಚಿತ್ರ ‘ಪ್ರೊಡಕ್ಷನ್ ನಂ 04’ ರ ಮುಹೂರ್ತ

ಮೈಸೂರು,ಜ.18:- ಮೈಸೂರಿನ ಯುವಕರ ನೂತನ ಕನ್ನಡ ಚಲನಚಿತ್ರ ‘ಪ್ರೊಡಕ್ಷನ್ ನಂ 04’ ರ ಮುಹೂರ್ತವನ್ನು ನೆರವೇರಿಸಲಾಯಿತು.

ಮೈಸೂರಿನ ಒಲಂಪಿಯಾ ಥಿಯೇಟರ್ ರಸ್ತೆಯಲ್ಲಿರುವ ವಿನಾಯಕ ದೇವಸ್ಥಾನದಲ್ಲಿಂದು ನಡೆದ ಚಿತ್ರ ಮುಹೂರ್ತಕ್ಕೆ ಚಿತ್ರ ನಟ ಜಯಪ್ರಕಾಶ್ ಅವರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದರು.

ಇದೇ ವೇಳೆ ನಟ ಜಯ ಪ್ರಕಾಶ್  ಮಾತನಾಡಿ ಯುವಕರು ಚಿತ್ರ ನಿರ್ಮಾಣ ಮಾಡಬೇಕು. ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಮುಂದೆ ಬರಬೇಕು ಎಂದು ಚಿತ್ರ ತಂಡಕ್ಕೆ ಶುಭ ಹಾರೈಸಿದರು.

ನಂತರ ಚಿತ್ರದ ನಿರ್ದೇಶಕ ಸಾಗರ್ ಮಾತನಾಡಿ ಎಲ್ಲ ಹೊಸಬರೆ ಇರುವ ಚಿತ್ರದಲ್ಲಿ ಕಥೆಯೇ ಹೀರೋ. ಲವ್ ಸೆಂಟಿಮೆಂಟ್ ಎಲ್ಲವೂ ಚಿತ್ರದಲ್ಲಿದೆ. ಸಾಕಷ್ಟು ಭಾಗ ಮೈಸೂರಿನಲ್ಲಿಯೇ ಚಿತ್ರಿಕರಣ ನಡೆಯಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿತ್ರ ತಂಡದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: