ದೇಶಪ್ರಮುಖ ಸುದ್ದಿ

ಕಾಂಗ್ರೆಸ್‌ ಜತೆಗೆ ರಾಜಿಗೆ ಒಕೆ – ಆದರೆ ಕಂಡಿಷನ್ ಅಪ್ಲೈ: ಸಂಸದ ಓವೈಸಿ

ಮುಂಬಯಿ (ಜ.18): ವಿರೋಧ ಪಕ್ಷಗಳ ಮಹಾ ಮೈತ್ರಿಕೂಟದಲ್ಲಿ ಪ್ರಕಾಶ್‌ ಅಂಬೇಡ್ಕರ್‌ ಅವರ ಭಾರಿಪ್‌ ಬಹುಜನ ಮಹಾಸಂಘಕ್ಕೆ ಗೌರವಯುತ ಸಂಖ್ಯೆಯ ಸೀಟುಗಳನ್ನು ಕೊಡಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಒಪ್ಪಿದಲ್ಲಿ ಅವರೊಂದಿಗೆ ಮೈತ್ರಿಗೆ ತಾನು ಸಿದ್ಧ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಹಾಗೂ ಹೈದರಾಬಾದ್‌ ಸಂಸದರಾಗಿರುವ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ.

ಮಹಾರಾಷ್ಟ್ರದ ನಾಂದೇಡ್‌ನ‌ಲ್ಲಿ ರಾಲಿಯೊಂದರಲ್ಲಿ ಮಾತನಾಡುತ್ತಿದ್ದ ಓವೈಸಿ, ರಾಹುಲ್‌ ಗಾಂಧಿ ನಮ್ಮ ಈ ಶರತ್ತಿಗೆ ಒಪ್ಪಿದಲ್ಲಿ ಕಾಂಗ್ರೆಸ್‌ ಜತೆಗೆ ರಾಜಿಗೆ ನಾವು ಸಿದ್ಧ ಎಂದು ಪ್ರಕಟಿಸಿದರು.

ರಾಹುಲ್‌ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಸ್ಥ ಅಶೋಕ್‌ ಚವಾಣ್‌ ಅವರಿಗೆ ಎಐಎಂಐಎಂ ಜತೆಗೆ ಏನಾದರೂ ಸಮಸ್ಯೆ ಇದ್ದರೆ ಅವರು ನನ್ನ ಹಿರಿಯ ಸಹೋದರರಾಗಿರುವ ಪ್ರಕಾಶ್‌ ಅಂಬೇಡ್ಕರ್‌ ಜತೆಗೆ ಮಾತುಕತೆ ನಡೆಸಬೇಕು ಎಂದು ಓವೈಸಿ ಅವರು ರಾಲಿಯಲ್ಲಿ ಮಾತನಾಡುತ್ತಾ ಹೇಳಿದರು. (ಎನ್.ಬಿ)

Leave a Reply

comments

Related Articles

error: