ದೇಶಮನರಂಜನೆ

ಕೆ.ಜಿ.ಎಫ್. ಚಿತ್ರ ವೀಕ್ಷಿಸಿ ಶಿಳ್ಳೆ ಹೊಡೆದ ತಮಿಳು ಸ್ಟಾರ್ ವಿಜಯ್!

ಬೆಂಗಳೂರು (ಜ.18): ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್’ ಚಿತ್ರ ಬಿಡುಗಡೆಯಾಗಿ ನಾಲ್ಕು ವಾರಗಳು ಉರುಳಿದರೂ, ಕೆ.ಜಿ.ಎಫ್ ಚಿತ್ರದ ಹವಾ ಮಾತ್ರ ಇನ್ನೂ ಕಮ್ಮಿ ಆಗಿಲ್ಲ. ಇದಕ್ಕೆ ಸಾಕ್ಷಿ ಎನ್ನವಂತೆ ತಮಿಳು ಸ್ಟಾರ್ ನಟರೂ ಕೂಡ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

ತಮಿಳು ಸ್ಟಾರ್ ನಟ ಇಳಯ ದಳಪತಿ ಎಂದೇ ಖ್ಯಾತರಾದ ವಿಜಯ್ ಅವರು ಕೂಡ ಕನ್ನಡದ ಸೆನ್ಸೇಷನಲ್ ಚಿತ್ರ ‘ಕೆ.ಜಿ.ಎಫ್’ ವೀಕ್ಷಿಸಿ ಶಿಳ್ಳೆ ಹೊಡೆದಿದ್ದಾರೆಂತೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಕೆಜಿಎಫ್ ಅಭಿಮಾನಿಗಳು ಮತ್ತಷ್ಟು ಖುಷ್ ಆಗಿದ್ದಾರೆ.

ಹೌದು, ಕನ್ನಡದ ಸೆನ್ಸೇಷನ್ ‘ಕೆ.ಜಿ.ಎಫ್’ ಚಿತ್ರವನ್ನು ದಳಪತಿ ವಿಜಯ್ ಅವರು ವೀಕ್ಷಿಸಿದ್ದು ಚಿತ್ರತಂಡಕ್ಕೆ ಭೇಷ್ ಎಂದಿದ್ದಾರೆ. ಅಂದ್ಹಾಗೆ, ‘ಕೆ.ಜಿ.ಎಫ್’ ಬಿಡುಗಡೆ ಆದಾಗಿನಿಂದಲೂ, ಚಿತ್ರವನ್ನು ನೋಡಲು ವಿಜಯ್ ಕಾಯುತ್ತಿದ್ದರು” ಎಂದು ಹರಿಚರಣ್ ಪುಡಿಪೆಡ್ಡಿ ಟ್ವೀಟ್ ಮಾಡಿದ್ದಾರೆ.

ಕೆ.ಜಿ.ಎಫ್ ಚಿತ್ರವನ್ನ ಮನಸಾರೆ ಮೆಚ್ಚಿಕೊಂಡಿರುವ ಕನ್ನಡಿಗರು ಥಿಯೇಟರ್‍ನಲ್ಲಿ ಹಲವು ಬಾರಿ ಸಿನಿಮಾವನ್ನ ವೀಕ್ಷಿಸಿದ್ದಾರೆ. ಐದು ಭಾಷೆಗಳಲ್ಲಿ ತೆರೆಕಂಡ ‘ಕೆ.ಜಿ.ಎಫ್’ ಸಿನಿಮಾ ಹಿಂದಿ, ತೆಲುಗು, ತಮಿಳಿನಲ್ಲೂ ಮ್ಯಾಜಿಕ್ ಮಾಡುತ್ತಿದೆ. ಶಾರುಖ್ ಖಾನ್ ಅಭಿನಯದ ‘ಝೀರೋ’ ಚಿತ್ರಕ್ಕೆ ‘ಕೆ.ಜಿ.ಎಫ್’ ಸೆಡ್ಡು ಹೊಡೆದು ಬಾಕ್ಸಾಫೀಸ್‍ನಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು.

ಹಲವು ಗಣ್ಯರ ಟ್ವೀಟ್:

”ಚೆನ್ನೈನಲ್ಲಿದ್ದ ಸ್ಪೆಷಲ್ ಸ್ಕ್ರೀನಿಂಗ್ ನಲ್ಲಿ ತಮಿಳು ನಟ ವಿಜಯ್ ಕನ್ನಡದ ಹಿಟ್ ಸಿನಿಮಾ ‘ಕೆ.ಜಿ.ಎಫ್’ (ತಮಿಳು ವರ್ಷನ್) ವೀಕ್ಷಿಸಿದ್ದಾರೆ. ವಿಜಯ್ ‘ಕೆ.ಜಿ.ಎಫ್’ ನಿಜಕ್ಕೂ ಇಷ್ಟವಾಗಿದೆ” ಎಂದು ರಮೇಶ್ ಬಾಲಾ ಟ್ವೀಟ್ ಮಾಡಿದ್ದಾರೆ.

”ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ‘ಕೆ.ಜಿ.ಎಫ್’ನ ನಟ ವಿಜಯ್ ಕಣ್ತುಂಬಿಕೊಂಡರು. ಅವರಿಗೆ ಚಿತ್ರ ತುಂಬಾ ಇಷ್ಟವಾಯಿತು. ‘ಕೆ.ಜಿ.ಎಫ್’ನ ಅವರು ಕಂಪ್ಲೀಟ್ ಆಗಿ ಎಂಜಾಯ್ ಮಾಡಿದರು” ಎಂದು ಕೌಶಿಕ್ ಎಲ್.ಎಮ್ ಟ್ವೀಟ್ ಮಾಡಿದ್ದಾರೆ.

”ಕೆ.ಜಿ.ಎಫ್’ ಚಿತ್ರವನ್ನ ನೋಡಿದ್ಮೇಲೆ, ಇಡೀ ಚಿತ್ರತಂಡಕ್ಕೆ ತಮಿಳು ನಟ ವಿಜಯ್ ಶುಭ ಹಾರೈಸಿದರು” ಎಂದು ರಾಜಶೇಖರ್ ಟ್ವೀಟ್ ಮಾಡಿದ್ದಾರೆ. (ಎನ್.ಬಿ)

Leave a Reply

comments

Related Articles

error: