ಮೈಸೂರು

ಮೈಸೂರಿಗೆ ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ ಬರುವಂತೆ ಮಾಡಲು ನಗರಪಾಲಿಕೆ ಆಯುಕ್ತರಿಗೆ ಮನವಿ

ಮೈಸೂರು,ಜ.18:-  ಸ್ವಚ್ಛ ಸರ್ವೇಕ್ಷಣಾ ಕೇಂದ್ರದ ತಂಡ ಬರುತ್ತಿರುವ ಹಿನ್ನೆಲೆ ಈ ಬಾರಿಯೂ ಮೈಸೂರಿಗೆ ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ ಬರುವಂತೆ ಮಾಡಲು ನಗರಪಾಲಿಕೆ ಆಯುಕ್ತರಿಗೆ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಅರವಿಂದ್ ಶರ್ಮಾ ಮನವಿ ಮಾಡಿದರು.

ಬಳಿಕ ಮಾತಬನಾಡಿದ ಅವರು ಕಳೆದ ವರ್ಷ 2017 ರಲ್ಲಿ ಮೈಸೂರು ಸ್ವಚ್ಛ ನಗರಿಯಲ್ಲಿ ಸ್ಥಾನದಲ್ಲಿ 5 ನೇ ಸ್ಥಾನಕ್ಕೆ ಕುಸಿದಿತ್ತು. ನಂತರದ ವರ್ಷದಲ್ಲಿ 2018 ರಲ್ಲಿ 8 ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಇದಕ್ಕೆ ಹಲವಾರು ಕಾರಣಗಳಿದ್ದವು ಮೈಸೂರಿನ ಹೃದಯಭಾಗದಲ್ಲಿನ ಲ್ಯಾನ್ ಡೌನ್ ಕಟ್ಟಡದ ಹಿಂಭಾಗದ ಕಸದ ಹಾಗೂ ಶೌಚದ ದುರ್ನಾತದ ವಿಷಯಕ್ಕೆ ಸಂಬಂಧ ಪಟ್ಟಂತೆ 9/3/16 ರಲ್ಲಿ ಅಂದಿನ ಮೇಯರ್ ಆಗಿದ್ದ ಬಿ.ಎಲ್.ಭೈರಪ್ಪನವರ ಗಮನಕ್ಕೆ ತಂದಿದ್ದೆ. ಆದರೂ ಕೂಡ ನಮ್ಮ ದುರಂತವೋ , ಬೇಜವಾಬ್ದಾರಿ ನಡೆಯಿಂದ ಇನ್ನೂ ಆ ಸಮಸ್ಯೆ ಜೀವಂತವಾಗಿದೆ. ಪಾಲಿಕೆಯ ಅಧಿಕಾರಿಗಳ ಜಾಣ ಕುರುಡು ಪ್ರದರ್ಶನ ಇಲ್ಲಿ ಎದ್ದು ಕಾಣುತ್ತದೆ. ಅರಮನೆಯ ಉತ್ತರದ್ವಾರದಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಿನ ನಿತ್ಯ ಒಂದಲ್ಲಾ ಒಂದು ಕನ್ನಡದ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಅಲ್ಲಿ ಬರುವ ಕನ್ನಡ ಪ್ರೇಮಿಗಳಿಗೆ ಹಾಗೂ ಅರಮನೆ ವೀಕ್ಷಣೆ ಮಾಡಲು ವಿಶ್ವದಾದ್ಯಂತ ಬರುವ ಪ್ರವಾಸಿಗರಿಗೆ  ಕೂಡ ಶೌಚಾಲಯದ ವ್ಯವಸ್ಥೆ ಇಲ್ಲ. ಅಲ್ಲಿ ಬರುವವರು ದಿನನಿತ್ಯ ಪರದಾಡುವ ಸ್ಥಿತಿ ಇದೆ. ನಗರದ ಸಿದ್ದಪ್ಪಾ ವೃತ್ತದ ಹತ್ತಿರ ಇರುವ ಹಳೆ ಜೆ ಎಸ್ ಎಸ್ ಶಿಕ್ಷಣ ಸಂಸ್ಥೆಯ ಬಳಿ ಹಾಗೂ  ನಾರಾಯಣ ಶಾಸ್ತ್ರಿ ರಸ್ತೆ ಲಕ್ಷ್ಮೀ ಪುರಂನಲ್ಲಿರುವ ಹೊಯ್ಸಳ ಕರ್ನಾಟಕ ಸಂಘದ ಪಕ್ಕದ ಕಿರಿದಾದ ರಸ್ತೆಯಲ್ಲಿ ಕೂಡ ಬಯಲಲ್ಲೇ ಶೌಚ ಮಾಡಿ ಸ್ವಚ್ಛತೆ ಹಾಳು ಮಾಡಲಾಗುತ್ತಿದೆ. ಟೌನ್ ಹಾಲ್ ಮುಂಭಾಗದ ಕಟ್ಟಡದಲ್ಲಿ ಕೂಡ ಸ್ವಚ್ಛತೆ ಇಲ್ಲದಾಗಿದೆ.  ಮೈಸೂರಿಗೆ ಬರುವ  ಮೊದಲನೇ ಪಟ್ಟವನ್ನು ಕಳೆದುಕೊಳ್ಳುವಲ್ಲಿ  ನಗರ ಪಾಲಿಕೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣ. ಮೈಸೂರಿನಲ್ಲಿ ಈ ಟಾಯ್ಲೇಟ್ ವ್ಯವಸ್ಥೆಯನ್ನು ಅರಮನೆಯ ನಾಲ್ಕೂ ಕಡೆ ಹಾಗೂ ಲ್ಯಾನ್ಸ ಡೌನ್ ಕಟ್ಟಡದ ಹಿಂಭಾಗ ಸಿದ್ದಪ್ಪ ಸ್ಕ್ವೇರ್ ಬಳಿ ಹಾಗೂ ಮೈಸೂರಿನ ಹಲವಾರು ಭಾಗದಲ್ಲಿ ಇಂತಹ ವ್ಯವಸ್ಥೆ ಮಾಡಿ ಮೈಸೂರಿಗೆ ಸ್ವಚ್ಛನಗರಿ ಪಟ್ಟ ಬರುವಲ್ಲಿ ಮೈಸೂರು ಮಹಾನಗರ ಪಾಲಿಕೆಯವರು ಸಹಕರಿಸಬೇಕೆಂದು ಮನವಿ ಮಾಡಿದ್ದು, ಈ ಬಾರಿಯೂ ಪಟ್ಟ ಕೈ ತಪ್ಪಿದರೆ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪಾಲಿಕೆಯ ಮುಂದೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: