ಮೈಸೂರು

ಲೆಕ್ಕಣಿಗರ ಹುದ್ದೆಯಲ್ಲಿದ್ದ ಗೌಡಯ್ಯ ಅಕಾಲಿಕ ಮರಣ ಹಿನ್ನೆಲೆ : ಆರ್ಥಿಕ ನೆರವು

ಮೈಸೂರು,ಜ.18:- ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಹುಣಸೂರು ಸಂಘದಲ್ಲಿ ಲೆಕ್ಕಣಿಗರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೌಡಯ್ಯ ಅವರು ಅಕಾಲಿಕ ಮರಣವನ್ನು ಹೊಂದಿದ ಹಿನ್ನೆಲೆಯಲ್ಲಿ ಮೈಸೂರು ಚಾಮರಾಜನಗರ ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷರಾದ ಜಿ.ಡಿ.ಹರೀಶ್ ಗೌಡ ಅವರು ಸಹಕಾರ ಸಂಘದ ವತಿಯಿಂದ 4.90ಲಕ್ಷರೂಗಳ ಚೆಕ್ ನೀಡುವ ಮೂಲಕ ಆರ್ಥಿಕ ನೆರವು ಒದಗಿಸಿದರು.

ಈ ವೇಳೆ ಸಂಘದ ಅಧ್ಯಕ್ಷರಾದ ಜಿ.ಎನ್ ವೆಂಕಟೇಶ್, ನಿರ್ದೇಶಕರಾದ ಬಸವಲಿಂಗಯ್ಯ, ಕಾರ್ಯದರ್ಶಿ ದೇವರಾಜುಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: