ಕ್ರೀಡೆಪ್ರಮುಖ ಸುದ್ದಿ

ರಣಜಿ : ರಾಜಸ್ಥಾನ ಮಣಿಸಿ ಸೆಮಿ ಫೈನಲ್‌ ಪ್ರವೇಶಿಸಿದ ಕರ್ನಾಟಕ

ಬೆಂಗಳೂರು (ಜ.18): ನಾಯಕ ಮನೀಶ್ ಪಾಂಡೆ (ಔಟಾಗದೆ 87) ಹಾಗೂ ಕರುಣ್ ನಾಯರ್(ಔಟಾಗದೆ 61)ಅರ್ಧಶತಕದ ಕೊಡುಗೆ ಬೆಂಬಲದಿಂದ ಆತಿಥೇಯ ಕರ್ನಾಟಕ ತಂಡ ರಾಜಸ್ಥಾನವನ್ನು ಆರು ವಿಕೆಟ್‌ಗಳಿಂದ ಮಣಿಸಿ ರಣಜಿ ಟ್ರೋಫಿಯಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದೆ.

ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಗೆಲ್ಲಲು 184 ರನ್ ಗುರಿ ಪಡೆದಿದ್ದ ಕರ್ನಾಟಕ 4ನೇ ದಿನವಾದ ಶುಕ್ರವಾರ 3 ವಿಕೆಟ್ ನಷ್ಟಕ್ಕೆ 45 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. ನೈಟ್‌ವಾಚ್‌ಮ್ಯಾನ್ ರೋನಿತ್ ಮೋರೆ(8)ಬೇಗನೆ ಔಟಾದರು.

ಆಗ ಜೊತೆಯಾದ ಕರುಣ್ ನಾಯರ್(ಔಟಾಗದೆ 61, 129 ಎಸೆತ, 6 ಬೌಂಡರಿ) ಹಾಗೂ ನಾಯಕ ಮನೀಶ್ ಪಾಂಡೆ(ಔಟಾಗದೆ 87, 75 ಎಸೆತ, 14 ಬೌಂಡರಿ, 2 ಸಿಕ್ಸರ್)5ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 129 ರನ್ ಜೊತೆಯಾಟ ನಡೆಸಿ 47.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಕರ್ನಾಟಕ ಗುರುವಾರ ನಡೆಯುವ ಸೆಮಿ ಫೈನಲ್‌ನಲ್ಲಿ ಸೌರಾಷ್ಟ್ರ ಅಥವಾ ಉತ್ತರ ಪ್ರದೇಶ ತಂಡವನ್ನು ಮುಖಾಮುಖಿಯಾಗಲಿದೆ. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನಾಯಕ ವಿನಯಕುಮಾರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. (ಎನ್.ಬಿ)

Leave a Reply

comments

Related Articles

error: