ದೇಶಪ್ರಮುಖ ಸುದ್ದಿ

ಲಡಾಕ್: ಹಿಮಪಾತಕ್ಕೆ 3 ಬಲಿ, ಹಿಮದಡಿ 10 ಮಂದಿ ಜೀವನ್ಮರಣ ಹೋರಾಟ

ಲೇಹ್ (ಜ.18): ಲಡಾಕಿನ ಖರ್ದುಂಗ್ ಲಾ ಪಾಸ್ ನಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಹಿಮಪಾತದಲ್ಲಿ 10 ಜನ ಹಿಮದಡಿ ಸಿಲುಕಿಕೊಂಡಿದ್ದು, ಮೂವರು ಸಾವಿಗೀಡಾಗಿದ್ದಾರೆ. ಹಿಮದಡಿಯಲ್ಲಿ ಸಿಲುಕಿಕೊಂಡವರ ರಕ್ಷಣಾ ಕಾರ್ಯ ನಡೆಯುತ್ತಿದೆ.

ಗುರುವಾರವೇ ಕಾಶ್ಮೀರದ 9 ಜಿಲ್ಲೆಗಳಿಗೆ ಹಿಮಪಾತವಾಗುವ ಸಂಭವವಿದೆ ಎಂದು ಮೊದಲೇ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿತ್ತು.  ಅನಂತ್ ನಾಗ್, ಬುದ್ಗಾಮ್, ಬಾರಮುಲ್ಲಾ, ಬಂಡಿಪೊರ, ಗಂಡೆರಬಲ್, ಕಾರ್ಗಿಲ್, ಕುಲ್ಗಾಮ್, ಕುಪ್ವಾರ ಮತ್ತು ಲೇಹ್‍ಗಳಲ್ಲಿ ಹಿಮಪಾತ ಸಂಭವಿಸುವ ಸಂಭವವಿದೆ ಎಂದು ಮುನ್ನಚ್ಚರಿಕೆ ನೀಡಲಾಗಿತ್ತು.

ಜಮ್ಮು-ಕಾಶ್ಮೀರದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಹಿಮಮಳೆ ಬೀಳುತ್ತಲೇ ಇದೆ. ಹಿಮದಡಿ ಸಿಲುಕಿಕೊಂಡ ಹತ್ತು ಜನರ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: