ಕರ್ನಾಟಕ

ಹೊಸ ಮದುವೆಯಾದ ಹುರುಪಿನಲ್ಲಿ ಇದ್ದೀನಿ, ರಜೆ ಕೊಡಿ! ಪೊಲೀಸ್ ಪೇದೆಯ ಪತ್ರ ವೈರಲ್

ಬೆಂಗಳೂರು (ಜ.18): ಹೊಸದಾಗಿ ಮದುವೆಯಾಗಿದ್ದೇನೆ. ಹೊಸ ಹುರುಪಿನಲ್ಲಿದ್ದೇನಿ ಹಾಗಾಗಿ ನನಗೆ 10 ದಿನಗಳ ರಜೆ ನೀಡಿ ಎಂದು ಪೊಲೀಸ್ ಪೇದೆಯೊಬ್ಬರು ವಿನೂತ ರೀತಿಯಲ್ಲಿ ರಜೆ ಪತ್ರ ಬರೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೇಗೂರು ಪೊಲೀಸ್ ಠಾಣೆ ಪೇದೆ ಮಾರುತಿ ಹೆಚ್.ಬಿ. ಅವರು ತಮ್ಮ ಇನ್ ಸ್ಪೆಕ್ಟರ್‍ಗೆ 10 ದಿನ ರಜೆ ಕೋರಿ ಬರೆದಿರುವ ಪತ್ರದಲ್ಲಿ ಹೊಸದಾಗಿ ಮದುವೆಯಾಗಿದ್ದೇನೆ, ಹೊಸ ಹುರುಪಿನಲ್ಲಿ ಇದ್ದೀನಿ, ನಮ್ಮ ಮನೆಯಲ್ಲಿ ದೇವರ ಪೂಜಾ ಕಾರ್ಯಕ್ರಮ ಇದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಪತ್ರ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹೊಸ ಮದ್ವೆ ಗಂಡಿಗೆ ರಜೆ ಕೊಡಿ ಎಂದು ತಾವೂ ಇನ್ ಸ್ಪೆಕ್ಟರ್ ಅನ್ನು ಕೇಳಿಕೊಂಡು ಟ್ರೋಲ್ ಮಾಡುತ್ತಿದ್ದಾರೆ.

(ಎನ್.ಬಿ)

Leave a Reply

comments

Related Articles

error: