ಕರ್ನಾಟಕಪ್ರಮುಖ ಸುದ್ದಿ

ಇದ್ದಕ್ಕಿದ್ದಂತೆ ಬೇರೊಂದು ರೆಸಾರ್ಟ್‍ಗೆ ಬಿಜೆಪಿ ಶಾಸಕರು ಶಿಫ್ಟ್

ಬೆಂಗಳೂರು (ಜ.18): ಇತ್ತ ಕಾಂಗ್ರೆಸ್‍ನ ನಿರ್ಣಾಯಕ ಶಾಸಕಾಂಗ ಸಭೆ ನಡೆಯಲು ವೇದಿಕೆ ಸಿದ್ಧಗೊಂಡಿದ್ದರೆ ಅತ್ತ ಹರಿಯಾಣದ ಗುರುಗ್ರಾಮದಲ್ಲಿರುವ ಬಿಜೆಪಿ ಶಾಸಕರನ್ನು ದಿಢೀರನೆ ಬೇರೊಂದು ರೆಸಾರ್ಟ್‍ಗೆ ಶಿಫ್ಟ್ ಮಾಡಿರುವುದು ಭಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಪ್ರಸ್ತುತ ಬಿಜೆಪಿ ಶಾಸಕರು ಗುರುಗ್ರಾಮದ ಐಟಿಸಿ ಗ್ರ್ಯಾಂಡ್ ಭಾರತ್ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದರು. ಆದರೆ ಅರ್ಧಕ್ಕೂ ಹೆಚ್ಚು ಶಾಸಕರನ್ನು ಲೆಮೆನ್ ಟ್ರೀ ರೆಸಾರ್ಟ್‍ಗೆ ಶಿಫ್ಟ್ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಎಲ್ಲವೂ ನಿರೀಕ್ಷೆಯಂತೆ ಇಂದು ಸಂಜೆ ವೇಳೆಗೆ ರೆಸಾರ್ಟ್‍ನಿಂದ ಶಾಸಕರು ಬೆಂಗಳೂರಿನತ್ತ ಮುಖ ಮಾಡಬೇಕಿತ್ತು. ಆದರೆ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಇನ್ನು ಎರಡು ದಿನ ರೆಸಾರ್ಟ್‍ನಲ್ಲೇ ಇರಬೇಕೆಂದು ಶಾಸಕರಿಗೆ ಸೂಚನೆ ಕೊಟ್ಟಿದ್ದಾರೆ. ಹೀಗಾಗಿಯೇ ಅರ್ಧದಷ್ಟು ಮಂದಿ ಶಾಸಕರನ್ನು ಇಂದು ಬೆಳಗ್ಗೆ ಶಿಫ್ಟ್ ಮಾಡಲಾಯಿತು ಎಂದು ಹೇಳಲಾಗುತ್ತಿದೆ.

ರೆಸಾರ್ಟ್‍ನಲ್ಲಿ 95ಕ್ಕೂ ಹೆಚ್ಚು ಶಾಸಕರು ವಾಸ್ತವ್ಯ ಹೂಡಿದ್ದಾರೆ. ಇದರಲ್ಲಿ 40ಕ್ಕೂ ಹೆಚ್ಚು ಶಾಸಕರನ್ನು ಲೆಮೆನ್ ಟ್ರೀ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡುವಂತೆ ಸೂಚಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: