ಮೈಸೂರು

ಉಪಶಮನ ಆರೈಕೆ ಕೇಂದ್ರ : ಸಮುದಾಯಕ್ಕೆ ಲೋಕಾರ್ಪಣೆ

ಮೈಸೂರು,ಜ.19:- ಸ್ವಾಮಿ ವಿವೇಕಾನಂದಯೂತ್ ಮೂವ್‍ಮೆಂಟ್ ಮತ್ತು ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೊಧನಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಿನ್ನೆ  ನಗರದ ಟಿ.ಬಿ.ಸ್ಯಾನಿಟೋರಿಯಂ ಆಸ್ಪತ್ರೆಯ ಆವರಣದಲ್ಲಿ‘ಉಪಶಮನ ಆರೈಕೆಕೇಂದ್ರ’ದ ಲೋಕಾರ್ಪಣೆ ಕಾರ್ಯಕ್ರಮವು ನಡೆಯಿತು.

ಈ ಕಾರ್ಯಕ್ರಮದಲ್ಲಿ ಉಪಶಮನ ಆರೈಕೆಗೆ ವಿಶ್ವದಲ್ಲಿಯೇ ಹೆಸರಾದ PalliumIndia  ಸಂಸ್ಥೆಯ ಅಧ್ಯಕ್ಷರಾದ ಪದ್ಮಶ್ರೀ ಪುರಸ್ಕೃತ ಡಾ. ಎಂ.ಆರ್. ರಾಜ್‍ಗೋಪಾಲ್‍  ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಉಪಶಮನ ಆರೈಕೆ ಕೇಂದ್ರವು ಪ್ರೀತಿಯದೇಗುಲವಾಗಿದೆ.ಈಗ ನಾವೆಲ್ಲ ಸ್ವತಂತ್ರವಾಗಿ ನಡೆದಾಡುತ್ತೇವೆ, ಆದರೆ ಮುಂದೆ ನಮಗೆ ಆಸರೆ ಬೇಕಾಗುತ್ತದೆ. ಬಹಳ ವರ್ಷಗಳಿಂದ ನಾವು ರೋಗವನ್ನು ಪತ್ತೆಹಚ್ಚುವ ಶಿಕ್ಷಣವನ್ನು ನೀಡುತ್ತಿದ್ದೇವೆ. ಅವರನ್ನು ಆರೋಗ್ಯ ಸೇವೆಯ ವೃತ್ತಿಪರರೆಂದುಕರೆಯುತ್ತೇವೆ. ಪ್ರತಿ ವರ್ಷ 55 ಮಿಲಿಯನ್ ಭಾರತೀಯರುಅಂದರೆ ಶೇ.4.5% ರಷ್ಟು ಜನರು ಆರೋಗ್ಯ ವೆಚ್ಚದಿಂದಾಗಿ ಬಡತನಕ್ಕೊಳಗಾಗುತ್ತಿದ್ದಾರೆ. 85 % ರಷ್ಟುಜನರು ದೀರ್ಘಾವಧಿ ಕಾಯಿಲೆಗಳಿಗೆ ತುತ್ತಾಗುತ್ತಾರೆ ಶೇ.15 ಭಾಗ ಕ್ಷಿಪ್ರವಾಗಿ ಮರಣ ಹೊಂದುತ್ತಾರೆ.ಸಂವಿಧಾನವು ಕೊನೆಯವರೆಗೂ ಆರೋಗ್ಯ ಸೇವೆಯನ್ನು ಘನತೆಯಿಂದ ಪಡೆಯುವ ಹಕ್ಕನ್ನು ನೀಡಿದೆ. ಆದರೆ ಅದನ್ನೇ ನಿರಾಕರಿಸಲಾಗುತ್ತಿದೆ. ಆರೋಗ್ಯ ಸೇವೆಗಳ ಯೋಜನೆಗಳನ್ನು ತಯಾರಿಸುವ ಹಂತದಲ್ಲಿ ಸಮುದಾಯವನ್ನು ಭಾಗವಹಿಸುವಂತೆ ಮಾಡಬೇಕು.ಇಂತಹ ಪ್ರಯತ್ನಗಳನ್ನು ಆರೋಗ್ಯ ಸೇವೆ ತಜ್ಞರು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಡಾ.ಎಂ.ಎ.ಬಾಲಸುಬ್ರಹ್ಮಣ್ಯ  ಪ್ರಾಸ್ತಾವಿಕ ಮಾತನಾಡಿ  2003 ರಲ್ಲಿ ಮೈಸೂರು ವೈದ್ಯಕೀಯ ಮಹಾವಿದ್ಯಾಲಯವು ಮೊಟ್ಟಮೊದಲ ಎ.ಆರ್.ಟಿ ಕೇಂದ್ರವನ್ನು ಹೆಚ್.ಐ.ವಿ ಸೋಂಕಿತರಿಗೆ ಆರಂಭಿಸಿತು. ಹೆಚ್.ಐ.ವಿಸೋಂಕಿತರ ಆರೈಕೆಯ ಭಾಗವಾಗಿ ಸ್ವಾಮಿ ವಿವೇಕಾನಂದಯೂತ್ ಮೂವ್‍ಮೆಂಟ್‍ನಲ್ಲಿ ಉಪಶಮನ ಆರೈಕೆ ಕೇಂದ್ರ 2011 ರಲ್ಲಿ ಆರಂಭವಾಯಿತು. ಉಪಶಮನ ಆರೈಕೆಯು ವೈದ್ಯರು, ದಾದಿಯರು, ಆಪ್ತ ಸಮಾಲೋಚಕರು, ಕುಂಟುಂಬ ಸದಸ್ಯರು ಮತ್ತು ಸಮುದಾಯದವರ ಸಹಯೋಗದೊಂದಗೆ ನಡೆಸುತ್ತಿರುವ ಸಮಗ್ರಆರೋಗ್ಯ ಸೇವೆಯಾಗಿದೆ. ಈ ದಿನ ಲೋಕಾರ್ಪಣೆಗೊಂಡಿರುವ ‘ಉಪಶಮನ ಆರೈಕೆ ಕೇಂದ್ರವು’ ಸರ್ಕಾರ, ಸ್ವಾಮಿ ವಿವೇಕಾನಂದಯೂತ್ ಮೂವ್‍ಮೆಂಟ್ ಸಂಸ್ಥೆ, ಉದ್ಯಮಿಗಳು ಮತ್ತು ಸಮದಾಯದವರ ಸಂಘಟಿತ ಪ್ರಯತ್ನದ ಫಲವಾಗಿದೆ ಎಂದು ತಿಳಿಸಿದರು.

ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ದಾಕ್ಷಾಯಿಣಿ.ಕೆ.ಆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗೌರವ ಅತಿಥಿಗಳಾಗಿ ಎನ್.ಆರ್.ಗ್ರೂಪ್‍ ಅಧ್ಯಕ್ಷರಾದ ಗುರು, ಬೆಂಗಳೂರಿನ BSCPL ಅಧ್ಯಕ್ಷರಾದ ಟಿ.ವಿ.ಮಂಜುನಾಥ್ ಹಾಗೂ ರೋಟರಿ ಮಿಡ್‍ಟೌನ್, ಮೈಸೂರು ವಿಭಾಗದ ಅಧ್ಯಕ್ಷರಾದ ಡಾ.ಕೆ.ಎ.ಪ್ರಹ್ಲಾದ್‍ ಭಾಗವಹಿಸಿದ್ದರು.

ಪ್ರಾರ್ಥನೆ, ಸ್ವಾಗತದ ನಂತರ ಉಪಶಮನ ಆರೈಕೆ ಕೇಂದ್ರವನ್ನು ಪದ್ಮಶ್ರೀ ಡಾ.ಎಂ.ಆರ್. ರಾಜ್‍ಗೋಪಾಲ್‍ ಸಮುದಾಯಕ್ಕೆ  ಲೋಕಾರ್ಪಣೆಗೊಳಿಸಿದರು.

ಸುತ್ತೂರು  ಸ್ವಾಮೀಜಿಗಳಾದ ಜಗದ್ಗುರು ಶಿವರಾತ್ರೀ ದೇಶಿ ಕೇಂದ್ರ ಸ್ವಾಮಿಗಳು ಉಪಶಮನ ಆರೈಕೆ ಕೇಂದ್ರಕ್ಕೆ ಶುಭ ಸಂದೇಶವನ್ನು ತಿಳಿಸಿದರು

ಉಪಶಮನ ಯೋಜನೆಕಾರ್ಯಕ್ರಮದಗೌರವ ನಿರ್ದೇಶಕರಾದ ರಾಮಕೃಷ್ಣ ಮುದ್ರೆಯವರು ಕಾರ್ಯಕ್ರಮಕ್ಕೆ ನಿರಂತರವಾಗಿ ಸಹಾಯ ನೀಡುತ್ತಿರುವವರನ್ನು ಸನ್ಮಾನಿಸಿದರು. (ಎಸ್.ಎಚ್)

Leave a Reply

comments

Related Articles

error: