ಮನರಂಜನೆಮೈಸೂರು

ನಾಳೆ ‘ಪಾಪ ಪಾಂಡು’ ಫ್ಯಾಮಿಲಿ ಮೈಸೂರಿನಲ್ಲಿ

ಮೈಸೂರು,ಜ.19:- ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪಾಪ ಪಾಂಡು’ ಸೀರಿಯಲ್‍ನ ಪಾಂಡು ಮತ್ತು ಶ್ರೀಮತಿ ಜೋಡಿ ಕನ್ನಡ ಪ್ರೇಕ್ಷಕರಿಗೆ ಮೋಡಿ ಮಾಡಿರೋದು ಅಕ್ಷರಶಃ ಸತ್ಯ. ನಗುವಿನ ಹೊಳೆಯನ್ನೇ ಹರಿಸೋ ಈ ಕಾಮಿಡಿಜೋಡಿ ಮೈಸೂರಿಗೆ ಬರಲಿದೆ.

ಜೊತೆಗೆ ‘ಪಾಪ ಪಾಂಡು’ ಧಾರಾವಾಹಿಯ ಪ್ರಧಾನ ನಿರ್ದೇಶಕ ಸಿಹಿಕಹಿ ಚಂದ್ರು ಹಾಗೂ ಅವರ ಸಂಪೂರ್ಣತಂಡ ಮೈಸೂರಿಗೆ ಆಗಮಿಸಲಿದೆ.

ಕಲರ್ಸ್ ಸೂಪರ್ ವಾಹಿನಿಯ ಮಗಳು ಜಾನಕಿ ಧಾರಾವಾಹಿಯ ಜಾನಕಿ ಮತ್ತು ನಿರಂಜನ್‍ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತಾರೆಗಳು ತಮ್ಮ ಹಾಡು-ಹರಟೆ-ಮಾತು-ಕತೆ-ಡ್ಯಾನ್ಸ್ ಮೂಲಕ ಜನರ ಮನ ರಂಜಿಸಲಿದ್ದಾರೆ.

ಇದೇ ಭಾನುವಾರ(ಜನವರಿ 20), ಸಂಜೆ ಐದು 5.30ಕ್ಕೆ ಕಲರ್ಸ್ ಸೂಪರ್ ವಾಹಿನಿಯು ‘ಫ್ಯಾಮಿಲಿ ಫಂಕ್ಷನ್’ ಕಾರ್ಯಕ್ರಮವನ್ನು ಮೈಸೂರಿನ  ಮಾನಸಗಂಗೋತ್ರಿ ಬಯಲುರಂಗ ಮಂದಿರ, ಮೈಸೂರು ವಿಶ್ವವಿದ್ಯಾಲಯ, ಇಲ್ಲಿ ಆಯೋಜಿಸಲಾಗಿದೆ.

ಕಲರ್ಸ್ ಸೂಪರ್‍ಚಾನೆಲ್‍ನ ಈ ಕಲರ್‍ಫುಲ್‍ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಮೊದಲು ಬಂದವರಿಗೆ ಆದ್ಯತೆ ಎಂದು ಪ್ರಕಟಣೆ ತಿಳಿಸಿದೆ. (ಎಸ್.ಎಚ್)

Leave a Reply

comments

Related Articles

error: