ಕರ್ನಾಟಕ

ಭ್ರಷ್ಟಚಾರ ಕುರಿತು ಯಶಸ್ವಿ ಜಾಗೃತಿ ಕಾರ್ಯಕ್ರಮ

ಹಾಸನ (ಜ.19): ಭ್ರಷ್ಟಚಾರ ನಿಗ್ರಹ ದಳದಿಂದ ಹೊಳೆನರಸೀಪುರ ತಾಲ್ಲೂಕಿನ ಹಳ್ಳಿ ಮೈಸೂರು ನಾಡ ಕಚೇರಿಯಲ್ಲಿಂದು ಜನ ಸಂಪರ್ಕ ಸಭೆಯನ್ನು ಸಾರ್ವಜನಿಕರ ಸಮ್ಮುಖದಲ್ಲಿ ನಡೆಸಲಾಯಿತು.

ಸಭೆಯಲ್ಲಿ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸ ನಿರ್ವಹಿಸುವಲ್ಲಿ ವಿಳಂಬ, ಲಂಚಕ್ಕಾಗಿ ಒತ್ತಾಯ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ, ನೌಕರರ ವಿರುದ್ದ ನಮಗೆ ದೂರನ್ನು ನೀಡಬಹುದಾಗಿದೆ, ಸಂಬಂದಪಟ್ಟ ಅಧಿಕಾರಿಯ ವಿರುದ್ದ ಹಾಸನ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಗೆ ಭೇಟಿ ಮಾಡಿ ಸಂಬಂದಪಟ್ಟ ಅಧಿಕಾರಿಗಳ ಬಗ್ಗೆ ಮಾಹಿತಿಯನ್ನು ಒದಗಿಸಬಹುದಾಗಿದೆ ಹಾಗೂ ಸರ್ಕಾರಿ ನೌಕರರು ತನ್ನ ಆಧಾಯಕ್ಕಿಂತ ಹೆಚ್ಚಿನ ಆಧಾಯ ಹೊಂದಿದ್ದರೆ, ಅಂಚೆ ಮೂಲಕ ನಮಗೆ ಅಕ್ರಮ ಆಸ್ತಿಯ ಬಗ್ಗೆ ತಿಳಿಸಬಹುದು ಎಂದು ಜಾಗೃತಿಯನ್ನು ಮೂಡಿಸಲಾಯಿತು.

ಅಕ್ರಮ ಆಸ್ತಿಯ ಮಾಹಿತಿ ತಿಳಿಸಿದ ವ್ಯಕ್ತಿಯ ಹೆಸರನ್ನು ನಾವು ಬಹಿರಂಗ ಪಡಿಸುವುದಿಲ್ಲ. ಎಂದು ಸಾರ್ವಜನಿಕರಿಗೆ ಹ್ಯಾಂಡ್ ಬಿಲ್‍ನ್ನು ವಿತರಿಸುವ ಮೂಲಕ ಮನವರಿಕೆ ಮಾಡಲಾಯಿತು. ಕಾರ್ಯಕಮದಲ್ಲಿ ಹಾಸನ ಎಸಿಬಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಿ.ಡಿ. ಜಗದೀಶ್ ಸಿಬ್ಬಂದಿಗಳೊಂದಿಗೆ ಸಭೆ ನಡೆಸಲಾಯಿತು. (ಎನ್.ಬಿ)

Leave a Reply

comments

Related Articles

error: