ಪ್ರಮುಖ ಸುದ್ದಿಮನರಂಜನೆಮೈಸೂರು

ಸೀತಾರಾಮ ಕಲ್ಯಾಣ ಸಿನಿಮಾಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕು ಅಂದ್ರು ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಸೀತಾರಾಮ ಕಲ್ಯಾಣ ಚಲನಚಿತ್ರದ ಟ್ರೈಲರ್ ಬಿಡುಗಡೆ

ಮೈಸೂರು,ಜ.19:-  ಸೀತಾರಾಮ ಕಲ್ಯಾಣ  ಸಿನಿಮಾಗೆ ನಿಮ್ಮೆಲ್ಲರ ಆಶೀರ್ವಾದ ಬೇಕು. ನಾನು ಇಲ್ಲಿ ಮುಖ್ಯಮಂತ್ರಿಯಾಗಿ ನಿಂತಿಲ್ಲ. ನಾನು ಸಿನಿಮಾ ನಿರ್ಮಾಪಕ, ಚೆನ್ನಾಂಬಿಕ ಸಂಸ್ಥೆಯಿಂದ ಇಲ್ಲಿ ನಿಂತಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಅವರಿಂದು ಬನ್ನಿಮಂಟಪದ ಕವಾಯತು ಮೈದಾನಲ್ಲಿ ಹಮ್ಮಿಕೊಳ್ಳಲಾದ  ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ ಚಲನಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನಾನು ವಿದ್ಯಾಭಾಸ್ಯ ಮುಗಿಸಿದ ಬಳಿಕ ನನ್ನ ಸಿನಿಮಾ ವೃತ್ತಿ ಜೀವನ ಆರಂಭಿಸಿದ್ದು ಮೈಸೂರಿನ ನಜರಬಾದ್ ನ ಮಹದೇಶ್ವರ ಕಾಂಪ್ಲೆಕ್ಸ್ ನಲ್ಲಿ. ನಾಡಿನ ಎಲ್ಲ ರೈತ ಬಂಧುಗಳು ಆತ್ಮವಿಶ್ವಾಸ ಮೂಡಿಸಿಕೊಳ್ಳಬೇಕು. ರೈತ ಬದುಕಿದ್ದರೆ ನಾಡು ಬದುಕುತ್ತದೆ ಅನ್ನೋ ಸಂದೇಶ ಈ ಚಿತ್ರದಲ್ಲಿದೆ. ನಾನು ಯಾವುದೇ ಅಡೆತಡೆಗೆ ಬಗ್ಗಲ್ಲ. ರೈತರು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು ಅನ್ನೊ ಉದ್ದೇಶ ನನ್ನದು ಎಂದರು.

ಕಾರ್ಯಕ್ರಮದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ, ಸಚಿವ ಜಿ.ಟಿ.ದೇವೇಗೌಡ  ನಟ ನಿಖಿಲ್ ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: