ಮೈಸೂರು

ಪತ್ರಕರ್ತರ 34ನೇ ರಾಜ್ಯ ಸಮ್ಮೇಳನ : ಪ್ರಧಾನ ವೇದಿಕೆ ಸ್ಥಳ ಪರಿಶೀಲನೆ

ಮೈಸೂರು,ಜ.21:- ಮೈಸೂರು ಜಿಲ್ಲೆ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಮಾರ್ಚ್ 1, 2ರಂದು ಪತ್ರಕರ್ತರ 34ನೇ ರಾಜ್ಯ ಸಮ್ಮೇಳನ ಆಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ಸುತ್ತೂರು ಶ್ರೀ ಕ್ಷೇತ್ರದ ಗದ್ದುಗೆ ಬಳಿ ನಿರ್ಮಾಣವಾಗುತ್ತಿರುವ ಪ್ರಧಾನ ವೇದಿಕೆ ಸ್ಥಳವನ್ನು ಸಮ್ಮೇಳನ ಕಾರ್ಯಾಧ್ಯಕ್ಷರು ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಿ.ಕೆ. ಮಹೇಂದ್ರ ಅವರ ನೇತೃತ್ವದಲ್ಲಿ  ಇತ್ತೀಚೆಗೆ ಪರಿಶೀಲಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜೆ. ಲೋಕೇಶ್ ಬಾಬು, ನಗರ ಉಪಾಧ್ಯಕ್ಷ ಸುಬ್ರಹ್ಮಣ್ಯ, ನಗರ ಕಾರ್ಯದರ್ಶಿ ಬಿ. ರಾಘವೇಂದ್ರ, ಕಾರ್ಯಕಾರಿ ಸಮಿತಿ ಸದಸ್ಯರಾದ ಮಾಚಮ್ಮ ಮಲ್ಲಿಗೆ, ಎಸ್. ಕೆ. ಚಂದ್ರಶೇಖರ್, ಜಯಶಂಕರ್ ಬದನಕುಪ್ಪೆ, ಶೇಖರ್ ಕಿರಗುಂದ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಆರ್. ಸತ್ಯನಾರಾಯಣ, ಜೆಎಸ್ಎಸ್ ಮಠದ ತ್ರಿಪುರಾಂತಕ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: