ಮೈಸೂರು

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈ ವೇ ಗೆ ಕಾವೇರಿ ಮಾತೆಯ ಹೆಸರಿಡಲು ಒತ್ತಾಯ

ಮೈಸೂರು,ಜ.21:-  ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಲ್ಲೊಂದಾದ ಬೆಂಗಳೂರಿನಿಂದ ಮೈಸೂರಿಗೆ ಶೀಘ್ರ ಸಂಪರ್ಕ ಕಲ್ಪಿಸುವ 6 ಪಥಗಳ ಹೆದ್ದಾರಿಯ ಕಾಮಗಾರಿಯು ಆರಂಭವಾಗಿರುವುದು ಸಂತಸದ ವಿಷಯವಾಗಿದ್ದು, ಅದಕ್ಕೆ ಕಾವೇರಿ ಮಾತೆಯ ಹೆಸರಿಡುವಂತೆ ಪ್ರಜ್ಞಾವಂತ ನಾಗರಿಕ ವೇದಿಕೆಯ ಜಯಸಿಂಹ ಎನ್ ಶ್ರೀಧರ್ ಒತ್ತಾಯಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಾದ ಕೊಡಗು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯ ಜನರಿಗೂ ಸಹಕಾರಿ ಯಾಗಿ ಪ್ರವಾಸಿ ತಾಣಗಳು ಬೆಂಗಳೂರಿನ ಜನರಿಗೆ ಇನ್ನಷ್ಟು ಹತ್ತಿರವಾಗಲಿದೆ. ಕನ್ನಡ ನಾಡಿನ ಜೀವನದಿ ಮತ್ತು ರೈತಬಂಧುಗಳ ಜೀವನಾಡಿಯಾಗಿರುವ ಕಾವೇರಿಯು ನಾಡಿನ ಪ್ರಮುಖ ನದಿಯಾಗಿರುವುದರಿಂದ ರಾಜ್ಯದ ಪ್ರಮುಖ ಹೆದ್ದಾರಿಯೂ ಆಗುತ್ತಿರುವುದರಿಂದ ಈ ಹೆದ್ದಾರಿಗೆ “ಕಾವೇರಿ ಎಕ್ಸ್ ಪ್ರೆಸ್ ವೇ” ಎಂದು ನಾಮಕರಣ ಮಾಡಿದರೆ ಕಾವೇರಿ ಮಾತೆಗೆ ಸಲ್ಲಿಸುವ ಅತೀ ದೊಡ್ಡ ಗೌರವ ಇದಾಗಲಿದೆ.

ಸಂಸದರಾದ ಪ್ರತಾಪ ಸಿಂಹ ಅವರು ಮತ್ತು ಈ ಭಾಗದ ಎಲ್ಲ ಸಚಿವರು,ಶಾಸಕರುಗಳು ಕೇಂದ್ರ ಸರ್ಕಾರಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ ಈ ಕೂಡಲೇ ಒತ್ತಾಯ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ. (ಎಸ್.ಎಚ್)

 

Leave a Reply

comments

Related Articles

error: