ಮೈಸೂರು

ಸ್ವಚ್ಛತಾ ಭಾರತ್ ಮಿಷನ್ 4ನೇ ವಾರ್ಷಿಕೋತ್ಸವ: ಸ್ವಚ್ಛತಾ ಹೀ ಸೇವಾ ಅಭಿಯಾನ

ಮೈಸೂರು,ಜ.21-ಮೈಸೂರು ನಗರಪಾಲಿಕೆ ವತಿಯಿಂದ ಸ್ವಚ್ಛ ಭಾರತ್ ಮಿಷನ್ ನ 4ನೇ ವಾರ್ಷಿಕೋತ್ಸವದ ಅಂಗವಾಗಿ ನಗರದೆಲ್ಲೆಡೆ `ಸ್ವಚ್ಛತಾ ಹೀ ಸೇವಾ’ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಅದರಂತೆ ಸೋಮವಾರ ನಗರಪಾಲಿಕೆ ಸದಸ್ಯ ಗೋಪಿ ಅವರ ನೇತೃತ್ವದಲ್ಲಿ ಗಣೇಶ ಭಂಡಾರ ವೃತ್ತದಿಂದ ಟಿ.ಕೆ.ಲೇಔಟ್ 4ನೇ ಹಂತ ಪೂರ್ತಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ನಾಳೆ (ಮಂಗಳವಾರ) ಜನತಾನಗರ, ಕೃಷ್ಣಮೂರ್ತಿಪುರಂನಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಶಿವನಂದ ಮೂರ್ತಿ, ಮಾಜಿ ನಗರಪಾಲಿಕೆ ಸದಸ್ಯ ಟಿ.ಬಿ.ಚಿಕ್ಕಣ್ಣ, ಟಿ.ಕೆ.ಲೇಔಟ್ ನ ಹಿರಿಯ ನಾಗರಿಕರು ಉಪಸ್ಥಿತರಿದ್ದರು. (ಎಂ.ಎನ್)

Leave a Reply

comments

Related Articles

error: