ಮೈಸೂರು

ನಡೆದಾಡುವ ದೇವರು ಡಾ. ಶಿವಕುಮಾರಸ್ವಾಮೀಜಿಯವರ ಅಗಲಿಕೆಗೆ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಕಂಬನಿ

ಮೈಸೂರು,ಜ.21:- ನಡೆದಾಡುವ ದೇವರು,ಶತಾಯಿಷಿ, ತ್ರಿವಿಧ ದಾಸೋಹಿ ಮತ್ತು ಕರ್ನಾಟಕ ರತ್ನ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮಿಜಿಯವರ ಅಗಲಿಕೆಯಿಂದ ಈ ನಾಡು ಬಡವಾಗಿದೆ. ಇವರನ್ನು ಕಳೆದುಕೊಂಡ ನಾವೇ ದುರ್ದೈವಿಗಳು.ಇವರ ಆತ್ಮಕ್ಕೆ ತಾಯಿ ಚಾಮುಂಡೇಶ್ವರಿ ಶಾಂತಿ ನೀಡಲಿ. ಅಸಂಖ್ಯಾತ ಭಕ್ತರ ಸಮೂಹಕ್ಕೆ ಇವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ತಿಳಿಸಿದ್ದಾರೆ.

ಮತ್ತೆ ಹುಟ್ಟಿ ಬನ್ನಿ ಗುರೂಜಿ, ನಡೆದಾಡುವ ದೇವರು , ಕರ್ನಾಟಕ ರತ್ನ , ಪದ್ಮ ಭೂಷಣ, ಸರ್ವೆ ಜನಃ ಸುಖಿನೋ ಭವಂತು ಅನ್ನುವ ದಿವ್ಯ ಚೇತನ, ಜಾತಿಯ ಕಟ್ಟಳೆ ಮೀರಿದ ಮಹಾನ್ ಪುರುಷ, ಕೋಟ್ಯಂತರ ಬಡ ವಿದ್ಯಾರ್ಥಿಗಳ ಆಶಾ ಕಿರಣ , ತ್ರಿವಿಧ ದಾಸೋಹ ಮೂರ್ತಿ, ವಿಶ್ವ ಮಾಣಿಕ್ಯ ಶಿವಕುಮಾರ ಮಹಾಸ್ವಾಮೀಜಿ  ನಿಮ್ಮ ಕಾಲಘಟ್ಟದಲ್ಲಿ ಬದುಕಿದ ನಾವೇ ಧನ್ಯರು ಎಂದು ಅವರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: