ಸುದ್ದಿ ಸಂಕ್ಷಿಪ್ತ

ಪೌರಕಾರ್ಮಿಕರ ನಿಗಮಕ್ಕೆ ನೇಮಿಸಲು ಒತ್ತಾಯ

ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ಆದಿ ದ್ರಾವಿಡ (ಪೌರಕಾರ್ಮಿಕ) ಯುವಕರ ಅಭಿವೃದ್ಧಿ ಮಹಾಸಂಘವು ನಂಜನಗೂಡು ನಗರಸಭಾ ಸದಸ್ಯರಾದ ಡಿ.ಆರ್.ರಾಜು ಅವರನ್ನು ಕರ್ನಾಟಕ ಪೌರಕಾರ್ಮಿಕ ಅಭಿವೃದ‍್ಧಿ ನಿಮಗದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಒತ್ತಾಯ ಮಾಡಿದೆ.

ಮೈಸೂರು ವಿಭಾಗದ ಮಂಡ್ಯ, ರಾಮನಗರ, ಚಾಮರಾಜನಗರ, ಕೊಡಗು, ಹಾಸನ ಹಾಗೂ ಮೈಸೂರು ಗ್ರಾಮಾಂತರದಲ್ಲಿ ಸುಮಾರ್ 4ರಿಂದ 5 ಲಕ್ಷ ಜನಸಂಖ್ಯೆ ಇದ್ದರೂ ಜನಾಂಗಕ್ಕೆ ರಾಜಕೀಯವಾಗಿ ಹೆಚ್ಚು ಸ್ಥಾನಮಾನ ದೊರೆತಿಲ್ಲ ಎಂದು ದೂರಿರುವ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್‍.ಸಿ.ಮಹದೇವಪ್ಪ, ಸಂಸದ ಧ್ರುವನಾರಾಯಣ ಅವರಿಗೆ ಡಿ.ಆರ್.ರಾಜು ಅವರನ್ನು ನೇಮಕ ಮಾಡುವಂತೆ ಒತ್ತಾಯಿಸಿದೆ.

Leave a Reply

comments

Related Articles

error: