ಪ್ರಮುಖ ಸುದ್ದಿ

ಜಾಮೀನಿಗೆ ಶ್ಯೂರಿಟಿ ನೀಡಲು ನಕಲಿ ದಾಖಲೆ ನೀಡಿ ವಂಚಿಸುತ್ತಿದ್ದ ಇಬ್ಬರ ಬಂಧನ

ರಾಜ್ಯ(ಬೆಂಗಳೂರು)ಜ.21:-ಜಾಮೀನಿಗೆ ಶ್ಯೂರಿಟಿ ನೀಡಲು  ನಕಲಿ ದಾಖಲೆ ನೀಡಿ ನ್ಯಾಯಾಲಯ ಮತ್ತು ಪೊಲೀಸ್ ಠಾಣೆಗೆ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬಸವೇಶ್ವರ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುರೇಶ್ ಬಾಬು ಮತ್ತು ಗೋವಿಂದ ರಾಜು ಬಂಧಿತ ಆರೋಪಿಗಳು. ಬಸವೇಶ್ವರ ಪೊಲೀಸ್ ಠಾಣೆಯ  ಶಿವಕುಮಾರ್ ಎಂಬ ಆರೋಪಿಗೆ ಜಾಮೀನು ಸಂಬಂಧ ಶ್ಯೂರಿಟಿ ನೀಡಲು ಸುರೇಶ್ ಬಾಬು ಮತ್ತು ಗೋವಿಂದ ರಾಜು ಶಿಕ್ಷಣ ಇಲಾಖೆಯ ನಕಲಿ ಗುರುತಿನ ಚೀಟಿ, ದಾಖಲೆಗಳನ್ನು ನೀಡಿ ವಂಚಿಸಲು ಯತ್ನಿಸಿದ್ದಾರೆ.

ಈ ವೇಳೆ ಬಸವೇಶ್ವರ ನಗರ ಪೊಲೀಸರು ಅನುಮಾನಗೊಂಡು ಪರಿಶೀಲಿಸಿದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಣದಾಸೆಗೆ ವಂಚನೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಬಂಧಿತ ಆರೋಪಿಗಳಿಂದ ನಕಲಿ ಸೀಲುಗಳು, ದಾಖಲೆಗಳನ್ನು ವಶಕ್ಕೆ ಪಡೆದು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: