
ಪ್ರಮುಖ ಸುದ್ದಿ
ಕಾಡಾನೆ ದಾಳಿ : ವೃದ್ಧೆ ಸಾವು
ರಾಜ್ಯ(ಚಾಮರಾಜನಗರ)ಜ.21:- ಸಂತೆಮರಳ್ಳಿಯಲ್ಲಿ ಕಾಡಾನೆಯೊಂದು ವೃದ್ಧೆಯ ಮೇಲೆ ದಾಳಿ ನಡೆಸಿದ ಪರಿಣಾಮ ವೃದ್ಧೆ ಸಾವನ್ನಪ್ಪಿರುವ ಘಟನೆ ಮಹಂತಾಳಪುರದಲ್ಲಿ ನಡೆದಿದೆ.
ಆನೆ ದಾಳಿಗೆ ಬಲಿಯಾದ ವೃದ್ಧೆ ಶಿವಮ್ಮ(70) ಎಂದು ತಿಳಿದು ಬಂದಿದ್ದು, ಈಕೆ ನಿನ್ನೆ ಸಂಜೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಮೀಪದ ಕರಡಿ ಮೋಳೆ ಅರಣ್ಯದಿಂದ ಆಹಾರವನ್ನು ಅರಸಿ ಬಂದ ಕಾಡಾನೆ ಶಿವಮ್ಮಳ ಮೇಲೆ ಹಠಾತ್ ದಾಳಿ ನಡೆಸಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. (ಕೆ.ಎಸ್,ಎಸ್.ಎಚ್)