ಕರ್ನಾಟಕಮೈಸೂರು

ಶೀಘ್ರದಲ್ಲೇ ದೊಡ್ಡಕೆರೆ ಮೈದಾನದ ಖಾತೆ ನಿರ್ಧಾರ: ಡಿ. ರಂದೀಪ್

 ದೊಡ್ಡಕೆರೆ ಮೈದಾನಕ್ಕೆ ಸಂಬಂಧಿಸಿದಂತೆ ರಾಜ ವಂಶಸ್ಥರು ಮತ್ತು ಕಂದಾಯ ಅಧಿಕಾರಿಗಳ ನಡುವೆ ನಡೆಯುತ್ತಿದ್ದ ವಿವಾದ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ಡಿ. ರಣದೀಪ್ ಅವರು, ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಯಾರ ಹೆಸರಿಗೆ ಖಾತೆ ಮಾಡಬೇಕೆಂಬುದರ ಕುರಿತು ನಿರ್ಧಾರ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಿ. ರಣದೀಪ್ ತಿಳಿಸಿದರು.

2016ರ ಏಪ್ರಿಲ್ ತಿಂಗಳಲ್ಲಿ ಹೈಕೋರ್ಟ್ ದೊಡ್ಡಕೆರೆ ಮೈದಾನದ 10.36 ಎಕರೆಯನ್ನು ರಾಜವಂಶಸ್ಥರ ಹೆಸರಿಗೆ ಖಾತೆ ಮಾಡಿಕೊಡಬೇಕೆಂದು ನಗರಪಾಲಿಕೆಗೆ ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ಪಾಲಿಕೆಯು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ನಂತರ ಸುಪ್ರೀಂ ಕೋರ್ಟ್ ರಾಜವಂಶಸ್ಥರ ಪರವಾಗಿ ತೀರ್ಪು ನೀಡಿತ್ತು.

ಇದಾದ ಬಳಿಕ ರಾಜವಂಶಸ್ಥರು ಮೈದಾನಕ್ಕೆ ಬೇಲಿ ಹಾಕಿಕೊಂಡಿದ್ದರು. ಆದರೆ 2 ದಿನಗಳ ಹಿಂದೆ  ಈ ಬೇಲಿಯನ್ನು ಕಂದಾಯ ಅಧಿಕಾರಿಗಳು ತೆರವುಗೊಳಿಸಿ, ‘ ಇದು ಸರ್ಕಾರಿ ಸ್ವತ್ತು’ ಎಂದು ಬೋರ್ಡ್ ಹಾಕಿದ್ದರು. ಆದರೆ ಮಾರನೆಯ ದಿನ ರಾಜವಂಶಸ್ಥರ ಕಡೆಯವರು ಈ ಬೋರ್ಡ್ ಅನ್ನು ಕಿತ್ತುಹಾಕಿದ್ದರು. ಪುನಃ ಅದನ್ನು ಸರ್ಕಾರಿ ಸ್ವತ್ತು ಎಂದು ಬೋರ್ಡ್‍ ಹಾಕಲಾಗಿತ್ತು.

ವಿವಾದಕ್ಕೆ ಸಂಬಂಧಿಸಿದಂತೆ “ದೊಡ್ಡಕೆರೆ ಮೈದಾನಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥರು ಸಲ್ಲಿಸಿದ್ದ ಅರ್ಜಿಯನ್ನು 8 ವಾರದೊಳಗೆ ಪರಿಶೀಲನೆ ಮಾಡಬೇಕು” ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಈಗ ಮೈದಾನದ ಜಾಗವು ಸರ್ಕಾರದ ಅಧೀನದಲ್ಲಿದೆ. ಖಾತೆ ಆದ ಮಾತ್ರಕ್ಕೆ ಟೈಟಲ್ ಡೀಡ್ ಆಗಬೇಕೆಂದು ಇಲ್ಲ” ಎಂದು ತಿಳಿಸಿದರು.

Leave a Reply

comments

Related Articles

error: