ಮೈಸೂರು

ಮೂವರು ಜಾನುವಾರ ಕಳ್ಳರ ಬಂಧನ : 1,50,000 ರೂ. ಮೌಲ್ಯದ 4 ಹಸು ವಶ

ಮೈಸೂರು,ಜ.22:- 18/01/2019 ರಂದು ರಾತ್ರಿ ಆಲನಹಳ್ಳಿ ಠಾಣಾ ವ್ಯಾಪ್ತಿಯ ರಿಂಗ್ ರಸ್ತೆಯ ಟಿ. ನರಸಿಪುರ ರಸ್ತೆ ಸಿಗ್ನಲ್ ಜಂಕ್ಷನ್ ಬಳಿ  ಆಲನಹಳ್ಳಿ ಮತ್ತು ಸಿದ್ದಾರ್ಥ ಸಂಚಾರ ಪೊಲೀಸರು ವಾಹನಗಳ ತಪಾಸಣೆ ನಡೆಸುವಾಗ ಒಂದು ಗೂಡ್ಸ್ ಟೆಂಪೋವನ್ನು ನಿಲ್ಲಿಸುವಂತೆ ಸೂಚಿಸಿದರೂ ಸಹ ಟೆಂಪೋವನ್ನು ನಿಲ್ಲಿಸದೇ ಹೋಗಿದ್ದು, ಬೆನ್ನಟ್ಟಿ ಟೆಂಪೋವನ್ನು ಹಿಡಿಯಲಾಗಿ ಟೆಂಪೋದಲ್ಲಿದ್ದ ಮೂವರು ಓಡಿಹೋಗಿದ್ದಾರೆ.  ಟೆಂಪೋ ಹಿಂಭಾಗದಲ್ಲಿದ್ದ 04 ಹಸುಗಳನ್ನು ಹಿಡಿದುಕೊಂಡು ನಿಂತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಶಾಂತಿನಗರ ನಿವಾಸಿಗಳಾದ  ಅಯೂಬ್ ಪಾಷ ಬಿನ್ ರಿಯಾಜ್ ಪಾಷ (20), ಶಾಂತಿ ನಗರ, ಸೈಯದ್ ಸಲ್ಮಾನ್ ಬಿನ್ ಸೈಯದ್ ಕಮಾಲ್ (22), ಮಹಮ್ಮದ್ ಶೋಹೆಲ್ ಬಿನ್ ಜಬೀ ( 19) ಎಂದು ಗುರುತಿಸಲಾಗಿದ್ದು, ಇವರನ್ನು  ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿ ಇವರುಗಳು ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯಲ್ಲಿ ಹಸುಗಳನ್ನು ಕಳ್ಳತನ ಮಾಡಿಕೊಂಡು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ.  ಆರೋಪಿಗಳನ್ನು ದಸ್ತಗಿರಿ ಮಾಡಿ 1,50,000ರೂ. ಮೌಲ್ಯದ 4 ಹಸುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಟೆಂಪೋವನ್ನು  ವಶಪಡಿಸಿಕೊಂಡಿದ್ದಾರೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. ಡಾ.ವಿಕ್ರಂ ಅಮಟೆ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎ.ಸಿ.ಪಿ. ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಆಲನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಮಂಜು ಕೆ.ಎಂ, ಸಿದ್ದಾರ್ಥ ಸಂಚಾರ ಠಾಣೆಯ ಪಿ.ಎಸ್.ಐ. ಸತೀಶ್ ಕುಮಾರ್ ಅರಸ್, ಎ.ಎಸ್.ಐ. ಸತ್ಯ ಕುಮಾರ್, ಸಿಬ್ಬಂದಿಗಳಾದ ಶ್ರೀಧರ್, ನಾಗರಾಜು ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: