ಮೈಸೂರು

ಪುಡಿಪುಡಿಯಾದ ಎರಡು ಸಾವಿರ ರೂ. ನೋಟು : ಜನತೆಯನ್ನು ಬೆಚ್ಚಿ ಬೀಳಿಸಿದ ಘಟನೆ

ಮೊದಲೇ ನೋಟುಗಳ ಅಮಾನ್ಯೀಕರಣದಿಂದ ಬೇಗನೇ ನೋಟನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಆದ ಆರ್.ಬಿ.ಐನ ಪ್ಲಾನ್ ಪ್ಲಾಫ್ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಕಾರಣ ಎರಡು ಸಾವಿರ ಮುಖ ಬೆಲೆಯ ನೋಟುಗಳು ಇಟ್ಟ ಸ್ಥಳದಲ್ಲೇ ಪುಡಿ ಪುಡಿಯಾಗುತ್ತಿರುವ ದೂರು ಇದೀಗ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ.

2000 ಮುಖಬೆಲೆಯ ನೋಟು ಇದೀಗ ಮತ್ತೆ ಸುದ್ದಿಯಲ್ಲಿದೆ. ಅದು ಅಂತಿಂಥ ಸುದ್ದಿಯಲ್ಲ. ಬೆಚ್ಚಿ ಬೀಳಿಸುವ ಸುದ್ದಿಯೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೇಳಿಬಂದಿದೆ. ನಗರ ನಿವಾಸಿಯೋರ್ವರ ಮನೆಯಲ್ಲಿರಿಸಿದ್ದ  ಎರಡು ಸಾವಿರ ಮುಖ ಬೆಲೆಯ ಹೊಸ ನೋಟುಗಳು ಪುಡಿ ಪುಡಿಯಾಗಿ ಉದುರುತ್ತಿರುವ ವಿಡಿಯೋವೊಂದು ಬಹಿರಂಗವಾಗಿದೆ. ಇದರಿಂದ ಗಾಬರಿಗೊಂಡ ಜನರು ಬ್ಯಾಂಕ್‌ಗಳ ಕಡೆ ಹೋಗುತ್ತಿರುವ ಬಗ್ಗೆಯೂ ಮಾಹಿತಿ ದೊರಕಿದೆ.

ಮೈಸೂರಿನ ಪಡುವಾರಹಳ್ಳಿಯ ವಿನೋದ್ ಕುಮಾರ್ ಡಿಸೆಂಬರ್ 30 ರಂದು ವಿವಿ ಮೊಹಲ್ಲಾದ ಕರ್ನಾಟಕ ಬ್ಯಾಂಕ್ ನಿಂದ 10,000 ಹಣ ಅಂದರೆ 2 ಸಾವಿರ ಮುಖಬೆಲೆಯ 4 ನೋಟುಗಳು ಹಾಗೂ 100 ರೂ ಮುಖಬೆಲೆಯ 2 ಸಾವಿರ ರೂ.ವನ್ನು ಬ್ಯಾಂಕ್ ನಿಂದ ಡ್ರಾ ಮಾಡಿ  ತಂದು ಜನವರಿ 13 ರ ತಮ್ಮ ಹುಟ್ಟುಹಬ್ಬದ ದಿನ ಹೊಸ ಮೊಬೈಲ್ ತೆಗೆದುಕೊಳ್ಳಲು ತಾಯಿಯ ಬಳಿ ನೀಡಿದ್ದರು. ಆದರೆ ವಿನೋದ್ ತಾಯಿ ಅದನ್ನು ಭದ್ರವಾಗಿ ಬೀರುವಿನಲ್ಲಿ ಇಟ್ಟಿದ್ದಾರೆ. ಆದರೆ, ಶುಕ್ರವಾರ(ಇಂದು) ಹುಟ್ಟುಹಬ್ಬದ ದಿನ ಮೊಬೈಲ್ ತೆಗೆದುಕೊಳ್ಳಲು ಬೀರುವಿನಿಂದ ಹಣ ತೆಗೆದಾಗ 2 ಸಾವಿರ ಮುಖ ಬೆಲೆಯ ನೋಟುಗಳು ಪರ್ಸ್‌ನಲ್ಲೇ ಹರಿದು ಹೋಗದೆ, ಇಲಿಯೂ ಕಡಿಯದೇ ಇಟ್ಟಲ್ಲಿಯೇ ಪುಡಿ ಪುಡಿಯಾಗಿವೆ.

2 ಸಾವಿರ ಮುಖಬೆಲೆಯ 4 ನೋಟುಗಳಲ್ಲಿ ಗಾಂಧೀಜಿ ಭಾವಚಿತ್ರದ ಕಡೆಯಲ್ಲಿ ಸುಣ್ಣ ಉದುರುವ ರೀತಿ ಉದುರುತ್ತಿದೆ. ಗಾಬರಿಯಿಂದ ಹಣ ತೆಗೆದುಕೊಂಡು ನಾವು ಡ್ರಾ ಮಾಡಿದ ಬ್ಯಾಂಕಿನವರ ಬಳಿ ಕೇಳಿದರೆ, ಬ್ಯಾಂಕಿನವರು ನೋಟು ಮೆಷಿನ್ ಗೆ ತುಂಬುವವರ ಬಳಿ ಹೋಗಿ ಕೇಳಿ ಎಂದಿದ್ದಾರೆ. ಇಲ್ಲಿಂದ ಪುನಃ ವಿನೋದ್ ಎಸ್‌ಬಿಎಂ ಶಾಖೆಗೆ ಹೋದರೆ ಅಲ್ಲಿ ಯಾರು ಇರಲೇ ಇಲ್ಲ. ಇದರಿಂದ ಬರ್ತಡೇ ದಿನ ಕಂಗಾಲಾಗುವ ಸರದಿ ವಿನೋದ್ ರದ್ದಾಗಿತ್ತು.

ಆರ್.ಬಿ. ಮುದ್ರಣ ದೋಷವೇ?

ಇನ್ನೂ ಎರಡು ಸಾವಿರ ಮುದ್ರಣ ಮಾಡುತ್ತಿರುವ ಆರ್.ಬಿ.ಐನ ದೋಷವಿರಬಹುದೇ ಎಂಬ ಅನುಮಾನಗಳು ಕಾಡತೊಡಗಿದೆ. ಹೊಸ ನೋಟು ಪೂರೈಕೆಗಾಗಿ ದಿನದ 24 ಗಂಟೆ ಕೆಲಸ ಮಾಡುವ ಆರ್‌ಬಿಐ ನೋಟು ಮುದ್ರಣಕ್ಕೆ ಗುಣಮಟ್ಟದ ಕಾಗದ ಬಳಸದೆ ಈ ರೀತಿಯ ಎಡವಟ್ಟುಗಳು ಆಗಿವೆಯೇ…? ಈ ಎಲ್ಲಾ ಅನುಮಾನಗಳಿಗೂ ಉತ್ತರ ಮೈಸೂರಿನ ಆರ್.ಬಿ.ಐ ನೀಡಬೇಕೆಂಬ ಒತ್ತಾಯ ಜನಸಾಮಾನ್ಯರದ್ದು. ಆದರೆ ಹುಟ್ಟುಹಬ್ಬದ ದಿನ ಎರಡು ಸಾವಿರದ ನೋಟು ಬದಲಿಸಿಕೊಡಿ ಎಂದು ಮನೆಯಿಂದ ಬ್ಯಾಂಕ್ ಹಾಗೂ ಬ್ಯಾಂಕ್ ನಿಂದ ಹಣ ತುಂಬುವವರ ಬಳಿ ಎಂದು ಅತ್ತಿಂದ್ದ ಇತ್ತ, ಇತ್ತಿಂದ ಅತ್ತ ವಿನೋದ್ ಓಡಾಡಿದ್ದು ಮಾತ್ರ ವಿಪರ್ಯಾಸವೇ ಸರಿ.

ಸುರೇಶ್ ಎನ್.

Leave a Reply

comments

Related Articles

error: