ಮೈಸೂರು

ಕ್ರೀಡೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯಕ : ಪ್ರೊ.ಬಿ.ವಿ ಸಾಂಬಶಿವಯ್ಯ

ಮೈಸೂರು,ಜ.22:- ಮೈಸೂರು ನಗರದ ಬಿ.ಎನ್ ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇತ್ತೀಚೆಗೆ ವಾರ್ಷಿಕ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಪ್ರೊ. ಎಂ. ಮಹದೇವಪ್ಪ ನವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಮುಖ್ಯಕಾರ್ಯನಿರ್ವಾಹಕರಾದ ಪ್ರೊ.ಬಿ.ವಿ ಸಾಂಬಶಿವಯ್ಯರವರು ಮಾತನಾಡಿ ಪಠ್ಯೇತರ ಚಟುವಟಿಕೆಗಳಲ್ಲಿ ಕ್ರೀಡೆಯು ಅತೀ ಮುಖ್ಯವಾದದ್ದು. ಇದರಿಂದ  ಉತ್ತಮ ಆರೋಗ್ಯ, ಬಲ, ಏಕಾಗ್ರತೆ ಮತ್ತು ನಾಯಕತ್ವದ ಗುಣಗಳು ಅಭಿವೃದ್ಧಿ ಹೊಂದುತ್ತವೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ  ಸಹಾಯಕವಾಗಿರುತ್ತವೆ ಎಂದು ತಿಳಿಸಿದರು.

ದೈಹಿಕ ಶಿಕ್ಷಣ ನಿರ್ದೇಶಕರಾದ ಎಂ ಕಾರ್ತಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ವೃಷಭೇಂದ್ರ ಪ್ರಾರ್ಥಿಸಿದರು. ಸಹಪ್ರಾಧ್ಯಾಪಕರಾದ ಬಿ.ಎಲ್ ಕಿರಣ್ ಸ್ವಾಗತಿಸಿದರು. ಸಹಪ್ರಾಧ್ಯಾಪಕ ಆರ್ ಮಲ್ಲೇಶ್ ವಂದಿಸಿದರು. ಎನ್.ಸಿ.ಸಿ ಅಧಿಕಾರಿಗಳಾದ ಡಾ.ಎಲ್ ವಿನಯ್ ಕುಮಾರ್ ನಿರೂಪಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: